hamburgerIcon
login

VIEW PRODUCTS

ADDED TO CART SUCCESSFULLY GO TO CART
  • Home arrow
  • Body Changes arrow
  • ಆರಂಭಿಕ ಗರ್ಭಾವಸ್ಥೆಯಲ್ಲಿ ಸ್ತನ ಬದಲಾವಣೆಗಳು ಮತ್ತು ನೋವು: ಕಾರಣಗಳು ಮತ್ತು ಪರಿಹಾರಗಳು I Breast Changes & Pain During Early Pregnancy: Causes and Remedies in Kannada arrow

In this Article

    ಆರಂಭಿಕ ಗರ್ಭಾವಸ್ಥೆಯಲ್ಲಿ ಸ್ತನ ಬದಲಾವಣೆಗಳು ಮತ್ತು ನೋವು: ಕಾರಣಗಳು ಮತ್ತು ಪರಿಹಾರಗಳು I Breast Changes & Pain During Early Pregnancy: Causes and Remedies in Kannada

    Body Changes

    ಆರಂಭಿಕ ಗರ್ಭಾವಸ್ಥೆಯಲ್ಲಿ ಸ್ತನ ಬದಲಾವಣೆಗಳು ಮತ್ತು ನೋವು: ಕಾರಣಗಳು ಮತ್ತು ಪರಿಹಾರಗಳು I Breast Changes & Pain During Early Pregnancy: Causes and Remedies in Kannada

    Updated on 1 February 2024

    ಒಬ್ಬ ಮಹಿಳೆ ಗರ್ಭಧರಿಸಿದ ನಂತರ ಹಲವಾರು ಬದಲಾವಣೆಗಳನ್ನು ಅನುಭವಿಸುತ್ತಾಳೆ. ಬದಲಾವಣೆಗಳು ಕೇವಲ ಭಾವನಾತ್ಮಕ ಮತ್ತು ಮಾನಸಿಕ ಮಾತ್ರವಲ್ಲ ದೈಹಿಕವಾಗಿಯೂ ಆಗಿರುತ್ತವೆ. ಯಾಕೆಂದರೆ ನಿಮ್ಮ ದೇಹವು ಮುಂದಿನ ಪ್ರಯಾಣಕ್ಕೆ ತನ್ನನ್ನು ತಾನೇ ಸಿದ್ಧಪಡಿಸುತ್ತಿದೆ. ಗರ್ಭಾವಸ್ಥೆಯಲ್ಲಿ ಸ್ತನ ಬದಲಾವಣೆಗಳು ನಿಮ್ಮ ದೇಹದಲ್ಲಿ ಆಗುವ ಅತ್ಯಂತ ಗಮನಾರ್ಹವಾದ ದೈಹಿಕ ಬದಲಾವಣೆಗಳಲ್ಲಿ ಒಂದಾಗಿದೆ. ಮಗುವಿನ ಆಗಮನಕ್ಕೆ ನಿಮ್ಮ ದೇಹವು ಸಿದ್ಧಗೊಳ್ಳುವುದರಲ್ಲಿ ಇದು ಒಂದು ಬದಲಾವಣೆಯಾಗಿರುವುದರಿಂದ ಗರ್ಭಾವಸ್ಥೆಯ ಆರಂಭದಿಂದಲೇ ನಿಮ್ಮ ಸ್ತನಗಳು ಬಹುತೇಕ ಬದಲಾಗಲಾರಂಭಿಸುತ್ತವೆ. ಗರ್ಭಧಾರಣೆಯ ಸಾಮಾನ್ಯ ಸೂಚನೆಯು ತಪ್ಪಿದ ಋತುಚಕ್ರವಾಗಿದ್ದರೂ , ಸ್ತನ ಬದಲಾವಣೆಗಳು ಮತ್ತು ಸ್ತನದಲ್ಲಿ ನೋವು ಗರ್ಭಧಾರಣೆಯ ಎರಡು ವಾರಗಳೊಳಗೆ ನೀವು ಗಮನಿಸಬಹುದಾದ ಆರಂಭಿಕ ಚಿಹ್ನೆಗಳಾಗಿವೆ.

    ಗರ್ಭಾವಸ್ಥೆಯಲ್ಲಿ ಸ್ತನ ಬದಲಾವಣೆಗಳಿಗೆ ಕಾರಣಗಳು (Causes For Breast Changes During Pregnancy in Kannada)

    ಆರಂಭಿಕ ಗರ್ಭಾವಸ್ಥೆಯಲ್ಲಿ ಸ್ತನ ಬದಲಾವಣೆಗಳಿಗೆ ಕಾರಣಗಳು ಯಾವುವು? ನಿಮ್ಮ ಸ್ತನಗಳು ಈಗ ಹೆಚ್ಚು ಮೃದುವಾಗಿ ಮತ್ತು ಮೊಲೆತೊಟ್ಟುಗಳು ಹೆಚ್ಚು ಸೂಕ್ಷ್ಮವಾಗಿರುತ್ತವೆ ಮತ್ತು ಅಹಿತಕರ ಅನುಭವ ನೀಡುತ್ತಿರುತ್ತವೆ ಎಂದು ನೀವು ಸಾಕಷ್ಟು ಸುಲಭವಾಗಿ ಪ್ರತ್ಯೇಕಿಸಬಹುದು. ಇವೆಲ್ಲವೂ ನಿಮ್ಮ ದೇಹವು ಈಗ ಪ್ರತಿ ರೀತಿಯಲ್ಲೂ ತಾಯಿಯಾಗಲು ಸಜ್ಜಾಗುತ್ತಿದೆ ಎಂಬುದಕ್ಕೆ ಸೂಚನೆಗಳಾಗಿವೆ.

    ಗರ್ಭಾವಸ್ಥೆಯ ಪ್ರಮುಖ ಪರಿಣಾಮ ನಿಮ್ಮ ದೇಹದಲ್ಲಿನ ಹಾರ್ಮೋನ್ ಮಟ್ಟಗಳ ಮೇಲೆ ಆಗುತ್ತದೆ. ನಿಮ್ಮ ದೇಹದಲ್ಲಿ, ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಎಂಬ ಎರಡು ಹಾರ್ಮೋನುಗಳು ಸ್ತನ್ಯಪಾನಕ್ಕಾಗಿ ಸ್ತನಗಳನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಮತ್ತು ಗರ್ಭಾವಸ್ಥೆಯಲ್ಲಿ ಹೆಚ್ಚಿನ ಸ್ತನ ಬದಲಾವಣೆಗಳಿಗೆ ಕಾರಣವಾಗುತ್ತವೆ.

    ಈಸ್ಟ್ರೊಜೆನ್, ಪ್ರೊಜೆಸ್ಟರಾನ್ ಮತ್ತು ಪ್ರೊಲ್ಯಾಕ್ಟಿನ್ ನಂತಹ ಗರ್ಭಧಾರಣೆಯ ಹಾರ್ಮೋನುಗಳು ಫಲೀಕರಣದ ನಂತರ ನಿಮ್ಮ ದೇಹದಿಂದ ಉತ್ಪತ್ತಿಯಾಗುತ್ತವೆ, ಇವು ನಿಮ್ಮ ಸ್ತನಗಳನ್ನು ಉತ್ತೇಜಿಸುತ್ತವೆ ಮತ್ತು ನಿಮ್ಮ ನವಜಾತ ಶಿಶುವಿಗೆ ಆಹಾರವನ್ನು ನೀಡುವಲ್ಲಿ ಅವುಗಳ ಪ್ರಮುಖ ಪಾತ್ರದಿಂದ ಹಾಲಿನ ಗ್ರಂಥಿಗಳು ವಿಸ್ತರಿಸಲು ಕಾರಣವಾಗುತ್ತದೆ. ಈ ದಿನಗಳಲ್ಲಿ ನೀವು ನಿಸ್ಸಂದೇಹವಾಗಿ ಅನುಭವಿಸುತ್ತಿರುವ ಸ್ತನ ಬದಲಾವಣೆ ನೇರವಾಗಿ ಇದರಿಂದಾಗುತ್ತದೆ. ನೀವು ಅನುಭವಿಸುತ್ತಿರುವ ನೋವು ವಾಸ್ತವವಾಗಿ ನಿಮ್ಮ ಸ್ತನಗಳು ಸ್ತನಪಾನಕ್ಕಾಗಿ ತಯಾರಾಗುತ್ತಿರುವುದರ ಸಂಕೇತವಾಗಿದೆ, ಮತ್ತು ಅದು ನಿಮ್ಮ ಗರ್ಭಾವಸ್ಥೆಯುದ್ದಕ್ಕೂ ಏರುಪೇರಾಗುತ್ತದೆ. ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ, ಅಂಗಾಂಶ ಹಿಗ್ಗುವಿಕೆಯಿಂದಾಗಿ ಹೆಚ್ಚಿನ ಮಹಿಳೆಯರು ಸ್ತನ ಮೃದುತ್ವ ಮತ್ತು ನೋವು ಅನುಭವಿಸುತ್ತಾರೆ.

    ಪ್ರೊಜೆಸ್ಟರಾನ್ ಮತ್ತು ಹ್ಯೂಮನ್ ಕೊರಿಯೊನಿಕ್ ಗೊನಡೋಟ್ರೋಪಿನ್ (ಎಚ್ಸಿಜಿ) ಈ ಎರಡು ಗರ್ಭಾವಸ್ಥೆಯ ಹಾರ್ಮೋನುಗಳಿಂದ ನಿಮ್ಮ ದೇಹದಲ್ಲಿ ರಕ್ತದ ಪರಿಮಾಣದಲ್ಲಿ ಏರಿಕೆ ಕಂಡುಬರುತ್ತದೆ. ಇದರ ಪರಿಣಾಮವಾಗಿ, ನಿಮ್ಮ ಸ್ತನಗಳು ಉಬ್ಬಿಕೊಳ್ಳಲು ಪ್ರಾರಂಭಿಸುತ್ತವೆ ಅಥವಾ ಭಾರವಾಗುತ್ತವೆ.

    ಮುಂದೆ, ಪಿಗ್ಮೆಂಟ್ ಕೋಶಗಳು ಅಥವಾ ನಿಮ್ಮ ದೇಹದಲ್ಲಿನ ಮೆಲನೋಸೈಟ್ಗಳು ಈ ಹಾರ್ಮೋನುಗಳಿಂದಾಗಿ ಬದಲಾಗುತ್ತವೆ. ಮೆಲನೋಸೈಟ್ಗಳು ನಿಮ್ಮ ಮೊಲೆತೊಟ್ಟುಗಳ ಬಣ್ಣಕ್ಕೆ ಕಾರಣವಾಗುವ ಜೀವಕೋಶಗಳಾಗಿವೆ. ಆದ್ದರಿಂದ, ನಿಮ್ಮ ಮಗುವಿಗೆ ನಿಮ್ಮ ಮೊಲೆತೊಟ್ಟುಗಳನ್ನು ಹೆಚ್ಚು ವಿಶಿಷ್ಟವಾಗಿ ಕಾಣಲು, ನಿಮ್ಮ ದೇಹವು ನಿಮ್ಮ ಮೊಲೆತೊಟ್ಟುಗಳ ಮಸುಕಾದ ಕೋಶಗಳನ್ನು ಕೆಳಗೆ ತಳ್ಳಲು ಪ್ರಾರಂಭಿಸುತ್ತದೆ ಮತ್ತು ಗಾಢವಾದ ಜೀವಕೋಶಗಳು ಮೇಲ್ಮೈಗೆ ಏರಲು ಪ್ರಾರಂಭಿಸುತ್ತವೆ. ಇದು ಸ್ತನ್ಯಪಾನ ಮಾಡುವ ಸಮಯ ಬಂದಾಗ ನಿಮ್ಮ ಮಗುವಿಗೆ ಗಮನಿಸಲು ನಿಮ್ಮ ಮೊಲೆತೊಟ್ಟುಗಳನ್ನು ಸುಲಭಗೊಳಿಸುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ಸ್ತನ ಬದಲಾವಣೆಗಳ ಬಗ್ಗೆ ಯೋಚಿಸಿದಾಗ ಕೆಲವು ಮಹಿಳೆಯರು ಸೂಕ್ಷ್ಮ ಮೊಲೆತೊಟ್ಟು ಪರಿಸ್ಥಿತಿಯನ್ನು ಅನುಭವಿಸುವ ಕಾರಣಗಳಲ್ಲಿ ಇದು ಬಹುಶಃ ಒಂದಾಗಿದೆ.

    ನೀವು ಯಾವ ಬದಲಾವಣೆಗಳನ್ನು ನಿರೀಕ್ಷಿಸಬಹುದು (What Changes Can You Expect in Kanadda?)

    ಗರ್ಭಾವಸ್ಥೆಯ ಆರಂಭದಲ್ಲಿ, ನೀವು ಸ್ತನ ಊತ, ಮೃದುವಾದ ಅಥವಾ ನೋಯುತ್ತಿರುವ ಸ್ತನಗಳಂತಹ ಬದಲಾವಣೆಗಳನ್ನು ಅನುಭವಿಸಬಹುದು ಮತ್ತು ನಿಮ್ಮ ಸ್ತನಗಳಲ್ಲಿ ಭಾರದ ಭಾವನೆ ಉಂಟಾಗಬಹುದು.

    1. ಮೊದಲ ತ್ರೈಮಾಸಿಕದಲ್ಲಿ (The First Trimester)

    ಮೊದಲ ತ್ರೈಮಾಸಿಕದಲ್ಲಿ, ನಿಮ್ಮ ಸ್ತನಗಳ ಮೇಲಿನ ರಕ್ತನಾಳಗಳು ದೊಡ್ಡದಾಗಿ ಮತ್ತು ಹೆಚ್ಚು ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ. ನಿಮ್ಮ ಸ್ತನಗಳ ಗಾತ್ರವು ಹೆಚ್ಚುತ್ತಲೇ ಇರುತ್ತದೆ, ಆದರೆ ನಿಮ್ಮ ದೇಹವು ಹಾರ್ಮೋನುಗಳ ಬದಲಾವಣೆಗಳಿಗೆ ಸರಿಹೊಂದುವುದರಿಂದ ಮೃದುತ್ವ ಮತ್ತು ನೋವಿನ ಭಾವನೆ ಮೊದಲ ಕೆಲವು ವಾರಗಳ ನಂತರ ನಿಧಾನವಾಗಿ ದೂರ ಹೋಗುತ್ತದೆ. ನಿಮ್ಮ ಮೊಲೆತೊಟ್ಟುಗಳು ದೊಡ್ಡದಾಗಬಹುದು ಮತ್ತು ಹೆಚ್ಚು ಸೂಕ್ಷ್ಮವಾಗಬಹುದು ಮತ್ತು ಅರಿಯೊಲಾ ಬಣ್ಣವು ಗಾಢವಾಗಬಹುದು.

    2. ಎರಡನೇ ತ್ರೈಮಾಸಿಕದಲ್ಲಿ (The Second Trimester)

    ಅವುಗಳ ಒಳಗೆ ಹಾಲಿನ ಡಕ್ಟ್ ಗಳು ಇರುವುದರಿಂದ ನಿಮ್ಮ ಸ್ತನಗಳು ಭಾರವಾಗಿರುತ್ತವೆ ಮತ್ತು ತುಂಬಿರುತ್ತವೆ. ಎರಡನೆಯ ತ್ರೈಮಾಸಿಕದ ಮಧ್ಯದಲ್ಲಿ, ನೀವು ಕೊಲೊಸ್ಟ್ರಮ್-ತರಹದ ಪೂರ್ವ ಹಾಲು ಅಥವಾ ಎದೆ ಹಾಲಿನ ಅತ್ಯಂತ ಆರಂಭಿಕ ರೂಪವನ್ನು ಉತ್ಪಾದಿಸಲು ಪ್ರಾರಂಭಿಸಬಹುದು. ಕೆಲವು ಮಹಿಳೆಯರು ಅದನ್ನು ಸೋರಿಕೆ ಅಥವಾ ಗಂಭೀರವಾದದ್ದೆನೊ ಎಂದು ಭಾವಿಸುತ್ತಾರೆ, ಆದರೆ ಇದು ಸಾಮಾನ್ಯವಾಗಿದೆ ಮತ್ತು ಚಿಂತೆ ಮಾಡಲು ಏನೂ ಇಲ್ಲ.

    3. ಮೂರನೇ ತ್ರೈಮಾಸಿಕದಲ್ಲಿ (The Third Trimester)

    ನಿಮ್ಮ ದೇಹವು ಗರ್ಭಧಾರಣೆಯ ಅಂತ್ಯಕ್ಕೆ ಸಮೀಪಿಸುತ್ತಿದ್ದಂತೆ ಮತ್ತು ಪ್ರಸವವನ್ನು ಸಮೀಪಿಸುತ್ತಿದ್ದಂತೆ, ನಿಮ್ಮ ಸ್ತನಗಳು ಭಾರವಾಗಿ ಮತ್ತು ದೊಡ್ಡದಾಗಿರುತ್ತವೆ. ಇದಲ್ಲದೆ, ನಿಮ್ಮ ಮೊಲೆತೊಟ್ಟುಗಳು ಅವುಗಳ ಸಾಮಾನ್ಯ ಗಾತ್ರಕ್ಕಿಂತ ಗಮನಾರ್ಹವಾಗಿ ದೊಡ್ಡದಾಗುತ್ತವೆ ಮತ್ತು ಅರಿಯೊಲಾ ಇನ್ನಷ್ಟು ಗಾಢವಾಗಬಹುದು. ಇವೆಲ್ಲವೂ ದೇಹವು ಹೆರಿಗೆಗೆ ತನ್ನನ್ನು ತಾನೇ ಸಿದ್ಧಪಡಿಸುತ್ತಿದೆ ಎಂಬುದಕ್ಕೆ ಸಂಕೇತಗಳಾಗಿವೆ. ಸ್ತನಗಳು ತುಂಬಾ ಜಾಸ್ತಿ ದೊಡ್ಡದಾಗುವುದರಿಂದ ನಿಮಗೆ ತುರಿಕೆ ಕೂಡ ಅನುಭವಿಸಬಹುದು.

    ಗರ್ಭಾವಸ್ಥೆಯಲ್ಲಿ ಸ್ತನ ನೋವಿಗೆ ಪರಿಹಾರಗಳು (Remedies For Breast Pain During Pregnancy in Kannada)

    ಮೊದಲ ತ್ರೈಮಾಸಿಕದಲ್ಲಿ, ನೀವು ಸ್ತನಗಳಲ್ಲಿ ಸ್ವಲ್ಪ ನೋವು ಮತ್ತು ಇತರ ಸ್ತನ ಬದಲಾವಣೆಗಳನ್ನು ಅನುಭವಿಸುತ್ತೀರಿ. ನಿಮ್ಮ ಸ್ತನಗಳು ಕೊಲೊಸ್ಟ್ರಮ್ - ನಿಮ್ಮ ಮಗುವಿನ ಮೊದಲ ಊಟ ಉತ್ಪಾದಿಸುವವರೆಗೂ ನಿಮ್ಮ ಸ್ತನಗಳ ಗಾತ್ರ ಮತ್ತು ಆಕಾರವು ಬದಲಾಗುವುದನ್ನು ನೀವು ನೋಡುತ್ತಲೇ ಇರುತ್ತೀರಿ. ಗರ್ಭಾವಸ್ಥೆಯಲ್ಲಿ ಸ್ತನ ನೋವನ್ನು ತೊಡೆದುಹಾಕಲು ಔಷಧಿಗಳನ್ನು ತೆಗೆದುಕೊಳ್ಳುವುದು ಮತ್ತು ಇತರ ಪರಿಹಾರಗಳನ್ನು ಆಯ್ಕೆ ಮಾಡುವುದರ ಜೊತೆಗೆ, ಗರ್ಭಾವಸ್ಥೆಯಲ್ಲಿ ಸ್ತನ ಬದಲಾವಣೆಗಳಿಂದಾಗಿ ನೀವು ಎದುರಿಸುತ್ತಿರುವ ಅಸಹಜತೆಯನ್ನು ಮತ್ತು ನೋವಿನ ಬಗ್ಗೆ ನಿಮ್ಮ ಸಂಗಾತಿಗೆ ತಿಳಿಸಬೇಕು.

    ಗರ್ಭಾವಸ್ಥೆಯಲ್ಲಿ ಸ್ತನ ಬದಲಾವಣೆಗಳ ಎಲ್ಲಾ ಹಂತಗಳನ್ನು ಎದುರಿಸಲು ಕೆಲವು ಮಾರ್ಗಗಳು ಇಲ್ಲಿವೆ:

    • ಕೆಲವು ಆರಾಮದಾಯಕ, ಅತ್ಯುತ್ತಮ ಮತ್ತು ಬೆಂಬಲಿತ ಬ್ರಾಗಳನ್ನು ಖರೀದಿಸುವ ಮೂಲಕ ಪ್ರಾರಂಭಿಸಿ. ಸಂಶ್ಲೇಷಿತ ವಸ್ತುಗಳಿಂದ ಮಾಡಿದ ಮತ್ತು ಅಂಡರ್ವೈರ್ ಬ್ರಾಗಳನ್ನು ತಪ್ಪಿಸಿ ಏಕೆಂದರೆ ಅವುಗಳು ನಿಮ್ಮ ನವಿರಾದ ಸ್ತನಗಳು ಮತ್ತು ನೋಯುತ್ತಿರುವ ಮೊಲೆತೊಟ್ಟುಗಳನ್ನು ಇನ್ನಷ್ಟು ಹಾನಿಮಾಡಬಹುದು.

    • ಮೊಲೆತೊಟ್ಟುಗಳ ಬಳಿ ಆರಾಮದಾಯಕವಾಗಿರುವ ಮೃದುವಾದ ಹತ್ತಿ ಬ್ರಾಗಳನ್ನು ಆಯ್ಕೆ ಮಾಡಿ

    • ನಿಮ್ಮ ಪಕ್ಕೆಲುಬು ವಿಸ್ತರಿಸಿದಾಗ ಮತ್ತು ನಿಮ್ಮ ಸ್ತನಗಳು ಬೆಳೆಯಲು ಪ್ರಾರಂಭಿಸಿದಾಗ ಶಾಂತಿಯಿಂದ ಉಸಿರಾಡಲು ಸಹಾಯ ಮಾಡುವ ಕೆಲವು ಹೆಚ್ಚುವರಿ ಕೊಕ್ಕೆಗಳನ್ನು ಹೊಂದಿರುವ ಮೆಟರ್ನಿಟಿ ಬ್ರಾಗಳನ್ನು ಧರಿಸಬಹುದು.

    • ನಿಮ್ಮ ಗರ್ಭಧಾರಣೆಯ ಮಧ್ಯದಲ್ಲಿ ನೀವು ನರ್ಸಿಂಗ್ ಬ್ರಾಗಳ ಉಪಯೋಗವನ್ನು ಪ್ರಾರಂಭಿಸಬಹುದು. ನಿಮ್ಮ ಮಗುವಿಗೆ ನೀವು ಹಾಲುಣಿಸುವಾಗ ಈ ಬ್ರಾಗಳು ಉಪಯುಕ್ತವಾಗುತ್ತವೆ, ಆದ್ದರಿಂದ ನೀವು ಈಗ ಅವುಗಳನ್ನು ಬಳಸಿಕೊಳ್ಳಬಹುದು, ಅವು ಮೆಟರ್ನಿಟಿ ಬ್ರಾಗಳ ಸೌಕರ್ಯದೊಂದಿಗೆ ಬರುತ್ತವೆ ಮತ್ತು ಸಂಪೂರ್ಣ ಸ್ತನ್ಯಪಾನ ಪ್ರಕ್ರಿಯೆಯನ್ನು ಸುಲಭಗೊಳಿಸುವ ತ್ವರಿತ ಕ್ಲಿಪ್-ಡೌನ್ ಕಪ್ಗಳನ್ನು ಹೊಂದಿರುತ್ತವೆ.

    • ಎಲ್ಲಾ ಮಹಿಳೆಯರು ಬ್ರಾ ಇಲ್ಲದೆ ಮಲಗಲು ಇಷ್ಟಪಡುವುದಿಲ್ಲ. ಆದಾಗ್ಯೂ, ನೀವು ನಿದ್ರೆಯ ಸಮಯದಲ್ಲಿ ಬ್ರಾಗಳನ್ನು ಧರಿಸಲು ಆದ್ಯತೆ ನೀಡಿದರೆ, ಸ್ಲೀಪ್ ಬ್ರಾಗಳನ್ನು ಆಯ್ಕೆ ಮಾಡಿ, ಏಕೆಂದರೆ ಅವು ವಿಶಾಲವಾದ ಪಟ್ಟಿಗಳು ಮತ್ತು ಮೃದುವಾದ ಹತ್ತಿ ಲೈನಿಂಗ್ನೊಂದಿಗೆ ಇರುತ್ತವೆ.

    • ನೀವು ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡುವುದನ್ನು ಪರಿಗಣಿಸುತ್ತಿದ್ದರೆ, ನೀವು ಸ್ಪೋರ್ಟ್ಸ್ ಬ್ರಾಗಳನ್ನು ಮಾತ್ರ ಆಯ್ಕೆ ಮಾಡಿ , ಏಕೆಂದರೆ ಅವು ತುಂಬಾ ಆರಾಮದಾಯಕವಾಗಿವೆ ಮತ್ತು ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡಲು ನಿರ್ದಿಷ್ಟವಾಗಿ ತಯಾರಿಸಲಾಗುತ್ತದೆ.

    ಟಿಪ್ಪಣಿ (Note)

    • ನಿಮ್ಮ ಗರ್ಭಧಾರಣೆಯ ಉದ್ದಕ್ಕೂ ನಿಮ್ಮ ಬ್ರಾ ಗಾತ್ರವು ಏರುಪೇರಾಗುತ್ತದೆ ಎಂದು ನಿರೀಕ್ಷಿಸಿ. ಗರ್ಭಧಾರಣೆಯು ನಿಮ್ಮ ಕಪ್ ಗಾತ್ರವನ್ನು ಒಂದು ಅಥವಾ ಎರಡು ಸಂಖ್ಯೆಯಷ್ಟು ಹೆಚ್ಚಿಸಲು ಕಾರಣವಾಗಬಹುದು. ನಿಮ್ಮ ಪಕ್ಕೆಲುಬು ಬೆಳೆಯುತ್ತಿದ್ದಂತೆ, ನಿಮ್ಮ ಬ್ಯಾಂಡ್ ಗಾತ್ರವು 26 ಮತ್ತು 30 ವಾರಗಳ ನಡುವೆ ಹೆಚ್ಚಾಗಬಹುದು. ನಂತರ ನಿಮ್ಮ ಗರ್ಭಾವಸ್ಥೆಯಲ್ಲಿ, ನಿಮ್ಮ ಕಪ್ ಗಾತ್ರ ಮತ್ತೆ ಹೆಚ್ಚಾಗಬಹುದು. ನಿಮ್ಮ ಹಾಲು ಸ್ತನ್ಯಪಾನಕ್ಕಾಗಿ ಸಿದ್ಧವಾದಾಗ ಪ್ರಸವದ ನಂತರ ನಿಮ್ಮ ಸ್ತನಗಳು ಒಂದು ಅಥವಾ ಎರಡು ಕಪ್ ಗಾತ್ರಗಳಷ್ಟು ಬೆಳೆಯುತ್ತವೆ. ನಿಮ್ಮ ಮಗುವಿಗೆ ನೀವು ಹಾಲುಣಿಸುತ್ತಿರುವವರೆಗೂ ಹಾಗೆ ಇರುತಡೆ ಮತ್ತು ಕೊನೆಯಲ್ಲಿ ನಿಮ್ಮ ಸ್ತನಗಳು ತಮ್ಮ ಗಾತ್ರಕ್ಕೆ ಮರಳುತ್ತವೆ.

    • ನೀವು ಗರ್ಭಿಣಿಯಾಗಿರುವಾಗ ನಿಮ್ಮ ದೊಡ್ಡದಾಗುವ ಸ್ತನಗಳಿಂದಾಗಿ ಒಂದು ಸಮಯದಲ್ಲಿ ಒಂದು ಅಥವಾ ಎರಡು ಬ್ರಾಗಳನ್ನು ಖರೀದಿಸುವುದು ಸೂಕ್ತವಾಗಿದೆ. ತನ್ಯಪಾನದ ಮೊದಲ ಕೆಲವು ವಾರಗಳವರೆಗೆ ಮತ್ತು ನಿಮ್ಮ ಗರ್ಭಧಾರಣೆಯ ನಂತರ (ಸುಮಾರು 38 ವಾರಗಳು) ನಿಮಗೆ ಕೆಲವು ಎಲಾಸ್ಟಿಕ್ ಹಾಲುಣಿಸುವ ಬ್ರಾಗಳು ಅಗತ್ಯವಿರುತ್ತದೆ. ನೀವು ಹಾಲು ಉತ್ಪಾದಿಸಲು ಪ್ರಾರಂಭಿಸಿದಾಗ, ನಿಮ್ಮ ಸ್ತನಗಳು ಗಮನಾರ್ಹವಾಗಿ ಹಿಗ್ಗುತ್ತವೆ.

    ನೈಸರ್ಗಿಕ ಮನೆಮದ್ದುಗಳು (Natural Home Remedies)

    • ಗರ್ಭಾವಸ್ಥೆಯಲ್ಲಿ ಸ್ತನ ಬದಲಾವಣೆಗಳನ್ನು ಎದುರಿಸಲು ನಿಮಗೆ ಸಹಾಯ ಮಾಡುವ ಮನೆಮದ್ದು ಎಂದರೆ ಹೆಚ್ಚು ನೀರು ಕುಡಿಯುವುದು. ಆದಾಗ್ಯೂ, ನಿಮ್ಮ ದೇಹದಲ್ಲಿ ಸಾಕಷ್ಟು ನೀರು ಇರುವುದರಿಂದ ನಿಮ್ಮ ಸ್ತನಗಳಲ್ಲಿ ಅಸಹಜತೆ ಮತ್ತು ಸಂಕಟವನ್ನು ಉಂಟುಮಾಡಬಹುದು. ಸಾಕಷ್ಟು ನೀರು ಕುಡಿಯುವ ಮೂಲಕ ಹೆಚ್ಚುವರಿ ದ್ರವಗಳು ಮತ್ತು ಹಾರ್ಮೋನುಗಳನ್ನು ಹೊರಹಾಕಲು ಸಹಾಯ ಮಾಡಿ. ನಿಮ್ಮ ಪಾನೀಯಕ್ಕೆ ಸ್ವಲ್ಪ ಶುಂಠಿ ಅಥವಾ ನಿಂಬೆ ಬೆರೆಸುವ ಮೂಲಕ ನೋವನ್ನು ನಿವಾರಿಸಬಹುದು.

    • ಸ್ವಲ್ಪ ಸಮಯ ಸೋಡಿಯಂ ಸೇವನೆಯ ಮೇಲೆ ಕಡಿವಾಣ ಹಾಕುವ ಮೂಲಕ ಸ್ತನದ ನೋವನ್ನು ನಿವಾರಿಸಬಹುದು. ಯಾವುದೇ ಗಮನಾರ್ಹ ಆಹಾರದ ಬದಲಾವಣೆಗಳನ್ನು ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಏಕೆಂದರೆ ರಕ್ತದ ಪರಿಮಾಣವನ್ನು ವೃದ್ಧಿಸಲು ಉಪ್ಪು ಸೇವನೆಯು ಅತ್ಯಗತ್ಯ.

    • ಉತ್ತಮ ಫೈಬರ್ ಮೂಲವಾದ ಅಗಸೆ ಬೀಜಗಳು ಸ್ತನದ ನೋವನ್ನು ಶಮನಗೊಳಿಸುತ್ತವೆ ಎಂದು ಹೇಳಲಾಗುತ್ತದೆ. ನೀರು, ಹಣ್ಣಿನ ರಸ, ಅಥವಾ ಮೊಸರಿನ ಜೊತೆ ಸೇರಿಸಿದಾಗ ಒಂದು ಚಮಚ ಪುಡಿಮಾಡಿದ ಅಗಸೆ ಬೀಜಗಳು ಸೇರಿಸಿ ಸೇವಿಸಿದಾಗ ಅದು ಗಮನಾರ್ಹ ಪರಿಣಾಮ ತೋರಿಸುತ್ತದೆ. ಗರ್ಭಧಾರಣೆಗೆ ಸಂಬಂಧಿಸಿದ ಸ್ತನ ನೋವನ್ನು ವಿಟಮಿನ್ ಗಳು ಮತ್ತು ಖನಿಜಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸುವ ಮೂಲಕ ನಿವಾರಿಸಬಹುದು.

    • ನಿಮ್ಮ ಎದೆಯ ಮೇಲೆ ಐಸ್ ಪ್ಯಾಕ್ ಇರಿಸಿ ಮತ್ತು ಅದನ್ನು ಟವೆಲ್ನಿಂದ ಮುಚ್ಚಿ. ನೀವು ಹೆಪ್ಪುಗಟ್ಟಿದ ಬಟಾಣಿ ಚೀಲವನ್ನು ಸಹ ಬಳಸಬಹುದು!

    • ಐಸ್ ಪ್ಯಾಕ್ ನಿಮಗಾಗಿ ಕೆಲಸ ಮಾಡದಿದ್ದರೆ, ಕೆಲವು ನಿಮಿಷಗಳ ಕಾಲ ಬಿಸಿ ಶವರ್ನಲ್ಲಿ ನೆನೆಸಲು ಪ್ರಯತ್ನಿಸಿ ಅದು ನಿಮಗೆ ಸಹಾಯ ಮಾಡಬಹುದು, ನಿಮ್ಮ ದೇಹದಲ್ಲಿ ಸಾಕಷ್ಟು ಉದ್ವಿಗ್ನ ಸ್ನಾಯುಗಳು ಇದ್ದರೆ, ನೀವು ಶಾಖದಿಂದ ಪ್ರಯೋಜನ ಪಡೆಯಬಹುದು.

    ಒಟಿಸಿ ಔಷಧಿ (OTC Medication)

    ಅಸೆಟಾಮಿನೋಫೆನ್ ಮತ್ತು ಆಸ್ಪಿರಿನ್, ಐಬುಪ್ರೊಫೆನ್ ಮತ್ತು ನ್ಯಾಪ್ರೊಕ್ಸೆನ್ ನಂತಹ ನಾನ್ಸ್ಟೆರಾಯ್ಡ ಆಂಟಿ ಇನ್ಫಮೇಟರಿ ಔಷಧಿಗಳು (ಎನ್ಎಸ್ಎಐಡಿಗಳು) ಗರ್ಭಾವಸ್ಥೆಯಲ್ಲಿ ಸ್ತನ ನೋವಿಗೆ ಪರಿಹಾರ ನೀಡಬಹುದು. ಆದಾಗ್ಯೂ, ಇವು ಓವರ್-ದಿ-ಕೌಂಟರ್ ಔಷಧಿಗಳಾಗಿದ್ದರೂ ಸಹ, ಅವುಗಳಲ್ಲಿ ಯಾವುದನ್ನಾದರೂ ಬಳಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

    ಮುಕ್ತಾಯ Conclusion

    ಈ ಬದಲಾವಣೆಗಳು ಪ್ರತಿ ಮಹಿಳೆಯಲ್ಲಿ ಭಿನ್ನವಾಗಿರುತ್ತವೆ ಮತ್ತು ನೀವು ಅವೆಲ್ಲವನ್ನೂ ಅನುಭವಿಸಬಹುದು ಅಥವಾ ಅನುಭವಿಸದೇ ಇರಬಹುದು ಅಥವಾ ಅವುಗಳನ್ನು ಹೆಚ್ಚಿನ ಅಥವಾ ಕಡಿಮೆ ಮಟ್ಟದಲ್ಲಿ ಅನುಭವಿಸಬಹುದು. ಆದಾಗ್ಯೂ, ಆರಾಮದಾಯಕ ಮತ್ತು ಬೆಂಬಲಿತ ಬ್ರಾ ಬಳಸುವುದು, ಸಡಿಲ ಮತ್ತು ಆರಾಮದಾಯಕ ಬಟ್ಟೆಗಳಲ್ಲಿ ಮಲಗುವುದು ಮತ್ತು ಸ್ತನ ಪ್ರದೇಶದ ಸುತ್ತ ಮೃದುವಾದ ಮಾಯಿಶ್ಚರೈಸರ್ ಬಳಸುವುದು ಮುಂತಾದ ಕೆಲವು ಸರಳ ಮಾರ್ಪಾಡು ಮಾಡುವ ಮೂಲಕ ನೀವು ಈ ಬದಲಾವಣೆಗಳನ್ನು ಸುಲಭಗೊಳಿಸಬಹುದು.

    References

    Yu, J. H., Kim, M. J., Cho, H., Liu, H. J., Han, S. J., & Ahn, T. G. (2013). Breast diseases during pregnancy and lactation. www.ncbi.nlm.nih.gov

    Tags:

    Breast pain in Pregnancy in Kannada, Remedies of Breast Pain in Kannada, Changes in breast in pregnancy in Kannada, Breast Changes & Pain During Early Pregnancy: Causes and Remedies in English

    Is this helpful?

    thumbs_upYes

    thumb_downNo

    Written by

    Ramya Bhat

    Get baby's diet chart, and growth tips

    Download Mylo today!
    Download Mylo App

    RECENTLY PUBLISHED ARTICLES

    our most recent articles

    Mylo Logo

    Start Exploring

    wavewave
    About Us
    Mylo_logo

    At Mylo, we help young parents raise happy and healthy families with our innovative new-age solutions:

    • Mylo Care: Effective and science-backed personal care and wellness solutions for a joyful you.
    • Mylo Baby: Science-backed, gentle and effective personal care & hygiene range for your little one.
    • Mylo Community: Trusted and empathetic community of 10mn+ parents and experts.