VIEW PRODUCTS
Nausea & Vomiting
Updated on 22 January 2024
ಗರ್ಭಾವಸ್ಥೆಯಲ್ಲಿ ಮುಂಜಾನೆಯ ವಾಕರಿಕೆಯು ಸುಮಾರು 70 ಪ್ರತಿಶತ ಗರ್ಭಿಣಿಯರು ಅನುಭವಿಸುವ ಅತ್ಯಂತ ಸಾಮಾನ್ಯ ಸ್ಥಿತಿಯಾಗಿದೆ. ಮಹಿಳೆಯು ಸುಮಾರು 6 ವಾರಗಳ ಗರ್ಭಿಣಿಯಾಗಿದ್ದಾಗ ಗರ್ಭಾವಸ್ಥೆಯ ವಾಕರಿಕೆ ಅಥವಾ ವಾಂತಿ ಪ್ರಾರಂಭವಾಗುತ್ತದೆ ಮತ್ತು ಇದು ಹಲವಾರು ವಾರಗಳು ಅಥವಾ ತಿಂಗಳುಗಳವರೆಗೆ ಇರುತ್ತದೆ. ಗರ್ಭಾವಸ್ಥೆಯಲ್ಲಿ ವಾಂತಿಯ ಲಕ್ಷಣಗಳು ಸಾಮಾನ್ಯವಾಗಿ ಎರಡನೇ ತ್ರೈಮಾಸಿಕದಲ್ಲಿ (13 ರಿಂದ 27 ವಾರಗಳು) ಕಡಿಮೆಯಾಗುತ್ತದೆ. ಆದಾಗ್ಯೂ, ಕೆಲವು ಮಹಿಳೆಯರಲ್ಲಿ, ಗರ್ಭಾವಸ್ಥೆಯಲ್ಲಿನ ವಾಕರಿಕೆ ಗರ್ಭಾವಸ್ಥೆಯ ಉದ್ದಕ್ಕೂ ಮುಂದುವರಿಯುತ್ತದೆ.
ಮುಂಜಾವಿನ ವಾಕರಿಕೆ ಎಂದು ಕರೆಯಲಾಗಿದ್ದರೂ, ಇದು ದಿನದ ಯಾವುದೇ ಸಮಯದಲ್ಲಿ ಸಂಭವಿಸಬಹುದು.
ಮುಂಜಾವಿನ ವಾಕರಿಕೆ ಒಂದು ಸಾಮಾನ್ಯ ಪರಿಸ್ಥಿತಿಯಾಗಿದೆ. ಆದರೆ ಕೆಲವು ಮಹಿಳೆಯರು ಗರ್ಭಿಣಿಯಾಗಿರುವ ಸಮಯದಲ್ಲಿ ಯಾವುದೇ ವಾಂತಿ, ವಾಕರಿಕೆ ಇರುವುದಿಲ್ಲ.
ಗರ್ಭಾವಸ್ಥೆಯಲ್ಲಿ ತೀವ್ರವಾದ ವಾಕರಿಕೆ ಕೆಲವು ಮಹಿಳೆಯರಲ್ಲಿ ಸಂಭವಿಸಬಹುದು. ಮಹಿಳೆಯರು ಪ್ರತಿದಿನ ಅಲ್ಪಾವಧಿಗೆ ಮುಂಜಾವಿನ ವಾಕರಿಕೆಯನ್ನು ಅನುಭವಿಸುತ್ತಾರೆ ಮತ್ತು ಅವರು ದಿನದಲ್ಲಿ ಒಂದು ಅಥವಾ ಎರಡು ಬಾರಿ ವಾಂತಿ ಮಾಡಬಹುದು. ತೀವ್ರವಾದ ಮುಂಜಾವಿನ ವಾಕರಿಕೆಯು ಕೆಲವು ಸಂದರ್ಭಗಳಲ್ಲಿ, ಪ್ರತಿದಿನ ಹಲವಾರು ಗಂಟೆಗಳ ಕಾಲ ಮುಂದುವರಿಯಬಹುದು. ವಾಂತಿ ಮಾಡುವಿಕೆಯು ಸಹ ಆಗಾಗ್ಗೆ ಸಂಭವಿಸುತ್ತವೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಅನುಭವಿಸುವ ಅತಿಯಾದ ವಾಂತಿಯನ್ನು ಹೈಪೆರೆಮೆಸಿಸ್ ಗ್ರ್ಯಾವಿಡಾರಮ್ ಎಂದು ಕರೆಯಲಾಗುತ್ತದೆ.
ಆರಂಭಿಕ ಗರ್ಭಾವಸ್ಥೆಯಲ್ಲಿ ವಾಕರಿಕೆ ಆಗುವುದಕ್ಕೆ ಕಾರಣವು ಸಂಪೂರ್ಣವಾಗಿ ತಿಳಿದಿಲ್ಲ. ರಕ್ತದಲ್ಲಿನ ಕಡಿಮೆ ಸಕ್ಕರೆ ಅಂಶ ಅಥವಾ ಈಸ್ಟ್ರೊಜೆನ್ ಅಥವಾ ಹ್ಯೂಮನ್ ಕ್ರಾನಿಕ್ ಗೊನೆಡೋಟ್ರೋಪಿನ್ (ಎಚ್ಸಿಜಿ) ನಂತಹ ಗರ್ಭಧಾರಣೆಯ ಹಾರ್ಮೋನುಗಳ ಏರಿಕೆಯಿಂದಾಗಿ ಇದು ಸಂಭವಿಸಬಹುದು. ಅತಿಯಾಗಿ ಸುಸ್ತಾಗುವುದು, ಒತ್ತಡಕ್ಕೊಳಗಾಗುವುದು, ಕೆಲವು ಆಹಾರಗಳನ್ನು ಸೇವಿಸುವುದು ಅಥವಾ ಚಲನೆಯ ಕಾಯಿಲೆ ಹೊಂದುವುದರಿಂದ ಈ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.
ತೀವ್ರವಾದ ಮುಂಜಾವಿನ ವಾಕರಿಕೆಯಿಂದ ಬಳಲುತ್ತಿರುವ ಮಹಿಳೆಯರು ಅನುಭವಿಸುವ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ:
ದಿನದಲ್ಲಿ ಮೂರು ಅಥವಾ ಹೆಚ್ಚು ಬಾರಿ ವಾಂತಿ ಮಾಡುವುದು.
5 ಪೌಂಡ್ಗಳಿಗಿಂತ ಹೆಚ್ಚು ತೂಕವನ್ನು ಕಳೆದುಕೊಳ್ಳುವುದು
ನಿರ್ಜಲೀಕರಣಗೊಳ್ಳುವುದು. ನಿರ್ಜಲೀಕರಣದ ಕೆಲವು ಚಿಹ್ನೆಗಳು ಮೂತ್ರವೇ ಇಲ್ಲ ಅಥವಾ ಕಡಿಮೆ ಮೂತ್ರ ಉತ್ಪಾದನೆ, ನಿಂತಾಗ ತಲೆತಿರುಗುವಿಕೆ ಮತ್ತು ಗಾಢ ಬಣ್ಣದ ಮೂತ್ರ.
ತೀವ್ರ ನಿರ್ಜಲೀಕರಣಕ್ಕೆ ಒಳಗಾಗುವ ಮಹಿಳೆಯರನ್ನು ಸಾಮಾನ್ಯವಾಗಿ IV ದ್ರವಗಳನ್ನು ನೀಡುವುದಕ್ಕಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತದೆ. ಇದು ದೇಹದಲ್ಲಿ ಜಲಸಂಚಯನ ಮಟ್ಟವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಮತ್ತು ಸರಿಯಾದ ಔಷಧಿಗಳೊಂದಿಗೆ, ಅವರು ವಾಕರಿಕೆಯಿಂದ ಪರಿಹಾರ ಪಡೆಯುತ್ತಾರೆ.
ರಾತ್ರಿಯಲ್ಲಿ ಗರ್ಭಾವಸ್ಥೆಯ ವಾಕರಿಕೆ ಗರ್ಭಿಣಿ ಮಹಿಳೆಯ ನಿದ್ರೆಗೆ ತೊಂದರೆಯಾಗುತ್ತದೆ ಮತ್ತು ಅವರು ಪುನಃ ನಿದ್ರೆಗೆ ಹೋಗುವುದನ್ನು ತಡೆಯಬಹುದು. ಗರ್ಭಾವಸ್ಥೆಯಲ್ಲಿ ಮುಸ್ಸಂಜೆಯ ವಾಕರಿಕೆಯು ಬರಲು ಯಾವುದೇ ತಿಳಿದಿರುವ ಕಾರಣಗಳಿಲ್ಲ. ಆದಾಗ್ಯೂ, ಈ ಪರಿಸ್ಥಿತಿಗೆ ಕಾರಣವಾಗುವ ಕೆಲವು ಅಂಶಗಳು ಹೀಗಿವೆ:
ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ
ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಮಟ್ಟದಲ್ಲಿ ಏರಿಕೆ
ಜಾಸ್ತಿಯಾದ ವಾಸನೆ ಪ್ರಜ್ಞೆ ಮತ್ತು ವಾಸನೆಗಳಿಗೆ ಹೆಚ್ಚಿನ ಸಂವೇದನೆ
ರಾತ್ರಿಯಲ್ಲಿ ಗರ್ಭಾವಸ್ಥೆಯ ವಾಕರಿಕೆ ಮತ್ತು ವಾಂತಿಯು ಗರ್ಭಾವಸ್ಥೆಯ 14 ರಿಂದ 20 ವಾರಗಳ ಸಮೀಪಿಸಿದಂತೆ ಸರಿಯಾಗುತ್ತದೆ. ಆದಾಗ್ಯೂ, ಕೆಲವು ಮಹಿಳೆಯರು ತಮ್ಮ ಗರ್ಭಾವಸ್ಥೆಯುದ್ದಕ್ಕೂ ವಾಕರಿಕೆಯನ್ನು ಅನುಭವಿಸಬಹುದು. ಗರ್ಭಾವಸ್ಥೆಯಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸುವವರಿಗೆ ವೈದ್ಯರು ಔಷಧಿಗಳನ್ನು ಶಿಫಾರಸು ಮಾಡಬಹುದು ಆದ್ದರಿಂದ ವೈದ್ಯರೊಂದಿಗೆ ಮಾತನಾಡುವುದು ಉತ್ತಮ ವಿಚಾರ.
ಮೂರನೇ ತ್ರೈಮಾಸಿಕದಲ್ಲಿ ಮಹಿಳೆ ವಾಂತಿ ಅನುಭವಿಸಿದರೆ, ಪೌಷ್ಟಿಕಾಂಶದ ಕೊರತೆಗಳು ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುವುದನ್ನು ತಳ್ಳಿಹಾಕಲು ವೈದ್ಯರೊಂದಿಗೆ ಸಮಾಲೋಚಿಸುವುದು ಮುಖ್ಯವಾಗಿದೆ.
ಮೂರನೇ ತ್ರೈಮಾಸಿಕದಲ್ಲಿ ವಾಕರಿಕೆಯು ಗರ್ಭಿಣಿಯರು ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಸೂಚಿಸುತ್ತದೆ. GI ಪ್ರದೇಶದಲ್ಲಿ ಒತ್ತಡವು ಬೆಳೆಯುತ್ತಿದೆ ಮತ್ತು ಅದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿದೆ.
ಗರ್ಭಿಣಿ ಮಹಿಳೆಯರು ಹೊಟ್ಟೆಯುಬ್ಬರ, ಗ್ಯಾಸ್ , ಅಜೀರ್ಣ, ಮತ್ತು ಎದೆಯುರಿ ಅನುಭವಿಸಬಹುದು.
3 ನೇ ತ್ರೈಮಾಸಿಕದಲ್ಲಿ ವಾಕರಿಕೆಯು ನಿರಂತರ ವಾಂತಿ ಮತ್ತು ಕಡಿಮೆ ಹಸಿವಿಗೆ ಕಾರಣವಾಗಬಹುದು. ಈ ರೀತಿಯಾದರೆ ಆ ಗರ್ಭಿಣಿ ಮಹಿಳೆಯು ತೀವ್ರವಾದ ಮುಂಜಾವಿನ ವಾಕರಿಕೆಯಿಂದ ಬಳಲುತ್ತಿರುವ ಸಾಧ್ಯತೆ ಇದೆ.
ಕೆಲವು ಆಹಾರಗಳು ಮಹಿಳೆಯರಲ್ಲಿ ಗರ್ಭಾವಸ್ಥೆಯ ವಾಕರಿಕೆ ಪ್ರಚೋದಿಸಲು ಕಾರಣವಾಗುತ್ತವೆ. ಅವು:
ಮಸಾಲೆ ಆಹಾರಗಳು
ಬಿಸಿ ಆಹಾರಗಳು
ತುಂಬಾ ಸಿಹಿ ಆಹಾರಗಳು
ಕೊಬ್ಬಿನಂಶವಿರುವ /ಕರಿದ ಆಹಾರಗಳು
ಗರ್ಭಿಣಿಯನ್ನು ಕಾಡಬಹುದಾದ ಬಲವಾದ ವಾಸನೆಯ ಆಹಾರಗಳು.
ಗರ್ಭಾವಸ್ಥೆಯಲ್ಲಿ ವಾಕರಿಕೆ ವಿರುದ್ಧ ಹೋರಾಡುವ ಹಲವಾರು ಆಹಾರಗಳಿವೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ:
ಶುಂಠಿ ಚಹಾ
ಸೌತೆಕಾಯಿಗಳು ಅಥವಾ ಸೆಲರಿಯಂತಹ ಹೆಚ್ಚಿನ ನೀರಿನ ಅಂಶವಿರುವ ತರಕಾರಿಗಳು
ನಿಂಬೆ ಚಹಾ
ಮೊಸರು
ಚೆನ್ನಾಗಿ ಬೇಯಿಸಿದ ಮೊಟ್ಟೆಗಳು
ಸರಿಯಾಗಿ ಬೇಯಿಸಿದ ತರಕಾರಿಗಳು
ಬೇಯಿಸಿದ ಮೀನು ಅಥವಾ ಮಾಂಸ
ತರಕಾರಿ ಸೂಪ್ಗಳು
ನಟ್ಸ್ ಮತ್ತು ಬೀಜಗಳು ಗೋಡಂಬಿ, ಸೂರ್ಯಕಾಂತಿ ಬೀಜಗಳು, ಬೇಳೆಗಳು ಮತ್ತು ಹ್ಯಾಝೆಲ್ನಟ್ಸ್.
ಇತರ ಎಲ್ಲಾ ಆರೋಗ್ಯ ಸಮಸ್ಯೆಗಳಂತೆ, ಜನರು ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿನ ವಾಕರಿಕೆಗೆ ಮನೆಮದ್ದುಗಳನ್ನು ಹುಡುಕುತ್ತಾರೆ. ಗರ್ಭಿಣಿಯರಲ್ಲಿ ವಾಕರಿಕೆ ನಿವಾರಿಸುವ ಕೆಲವು ಮನೆಮದ್ದುಗಳು ಹೀಗಿವೆ:
ನಿಂಬೆ ಅಂಶವಿರುವ ತೈಲಗಳನ್ನು ಬಳಸುವುದು ಅಥವಾ ನಿಂಬೆಹಣ್ಣು ವಾಸನೆ ಇದು ಹೊಟ್ಟೆಯನ್ನು ಶಾಂತಗೊಳಿಸಬಹುದು.
ಬಲವಾದ ವಾಸನೆಗಳಿರುವ ಸ್ಥಳದಲ್ಲಿದ್ದಾಗ ಮಹಿಳೆ ಗಾಳಿಯಾಡುವ ಮಾಸ್ಕ್ ಅನ್ನು ಬಳಸಬಹುದು. ಆಹಾರಗಳ ಬಲವಾದ ವಾಸನೆಯನ್ನು ತಡೆಯಲು ಮಾಸ್ಕ್ ಸಹಾಯ ಮಾಡುತ್ತವೆ.
ನೀವು ಗರ್ಭಾವಸ್ಥೆಯಲ್ಲಿ ವಾಕರಿಕೆ ಇರುವುದರಿಂದ ಆಹಾರ ಸೇವಿಸದಿರುವುದು ಒಳ್ಳೆಯದಲ್ಲ . ಬದಲಾಗಿ, ಸಣ್ಣ ಪ್ರಮಾಣದಲ್ಲಿ ಆಗಾಗ್ಗೆ ತಿನ್ನುವುದು ನಿಮ್ಮ ಆರೋಗ್ಯಕ್ಕೆ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಬೆಳಗಿನ ವಾಕರಿಕೆಯನ್ನು ಎದುರಿಸಲು, ಬೆಳಿಗ್ಗೆ ಸಮಯದಲ್ಲಿ ಸಾದಾ ಬಿಸ್ಕತ್ ಗಳು ಅಥವಾ ಒಣ ಬ್ರೆಡ್ ಸೇವಿಸಿ.
ಹೊಟ್ಟೆಯುಬ್ಬರಕ್ಕೆ ಶುಂಠಿ ಒಳ್ಳೆಯದು. ಶುಂಠಿ ಚಹಾ, ಶುಂಠಿ ಸಂರಕ್ಷಕಗಳು, ಶುಂಠಿ ತುಂಡುಗಳು ಗರ್ಭಿಣಿಯರಿಗೆ ಕೆಲವು ಉತ್ತಮ ಆಯ್ಕೆಗಳಾಗಿವೆ.
ವ್ಯಾಯಾಮವು ಸಾಮಾನ್ಯವಾಗಿ ಅನೇಕ ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ವಾಕರಿಕೆ ಎದುರಿಸಲು ಸಹಾಯ ಮಾಡುತ್ತದೆ. ಗರ್ಭಿಣಿ ಮಹಿಳೆ ದಿನದಲ್ಲಿ ವಾಕ್ಗೆ ಹೋಗಬಹುದು, ಪ್ರಸವಪೂರ್ವ ಯೋಗ ತರಗತಿಗೆ ಸೇರಬಹುದು ಅಥವಾ ಈಜಲು ಹೋಗಬಹುದು.
ಕಿತ್ತಳೆಯಲ್ಲಿ ಉತ್ತಮ ಪ್ರಮಾಣದ ಸಿಟ್ರಿಕ್ ಆಮ್ಲವಿದೆ ಮತ್ತು ಇದನ್ನು ಉಸಿರಾಡಿದಾಗ ವಾಕರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಿತ್ತಳೆ ವಾಸನೆಯನ್ನು ತೆಗೆದುಕೊಳ್ಳಬಹುದು ಅಥವಾ ವಾಕರಿಕೆ ಭಾವನೆಯನ್ನು ಮೀರಿಸಲು ಕಿತ್ತಳೆ ರಸವನ್ನು ಕುಡಿಯಬಹುದು.
ಮೊಸರಿನಲ್ಲಿನ ಪ್ರೋಬಯಾಟಿಕ್ಗಳು- ಜೀರ್ಣಕ್ರಿಯೆಗೆ ನೆರವಾಗುವ ಉತ್ತಮ ಬ್ಯಾಕ್ಟೀರಿಯಾಗಳಿರುತ್ತವೆ. ಪ್ರತಿದಿನ ಎರಡು ಬಾರಿ ಒಂದು ಬಟ್ಟಲು ಮೊಸರು ಸೇವಿಸುವುದರಿಂದ ವಾಕರಿಕೆ ತಡೆಗಟ್ಟಲು ಸಹಾಯ ಮಾಡುತ್ತದೆ.
ಗರ್ಭಾವಸ್ಥೆಯಲ್ಲಿ 2ನೇ ತ್ರೈಮಾಸಿಕದಲ್ಲಿ ವಾಂತಿ ಎದುರಿಸಲು ಲವಂಗವನ್ನು ಸೇವಿಸುವುದು ಸಹ ಉತ್ತಮ ಮನೆಮದ್ದಾಗಿದೆ. ನಿಮಗೆ ವಾಕರಿಕೆ ಅನುಭವವಾದಾಗ ಲವಂಗದ ಮೊಗ್ಗನ್ನು ಅಗಿಯಿರಿ. ಇದು ಅಜೀರ್ಣ, ಅತಿಸಾರ ಮತ್ತು ವಾಕರಿಕೆಯಿಂದ ಪರಿಹಾರವನ್ನು ಒದಗಿಸುತ್ತದೆ. ಕುದಿಯುವ ನೀರಿಗೆ 2 ರಿಂದ 3 ಲವಂಗವನ್ನು ಸೇರಿಸಿ ಲವಂಗದ ಚಹಾ ಅಥವಾ ಪಾನೀಯವನ್ನು ತಯಾರಿಸಿ. ಇದು ವಾಂತಿ ಬರುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಾಕರಿಕೆ ಮತ್ತು ವಾಂತಿಯನ್ನು ಸೋಲಿಸಲು ಅರೋಮಾಥೆರಪಿ ಉತ್ತಮ ಮಾರ್ಗವಾಗಿದೆ. ಒಂದು ಕೈಚೀಲದ ಮೇಲೆ ಲ್ಯಾವೆಂಡರ್ ತೈಲ ಮತ್ತು ಪುದೀನಾ ಎಣ್ಣೆಯನ್ನು ಸಿಂಪಡಿಸಿ ನಂತರ ಅದರ ಹಿತವಾದ ವಾಸನೆಯನ್ನು ಉಸಿರಾಡಿರಿ.
ಗರ್ಭಾವಸ್ಥೆಯಿಂದಾಗಿ ಮುಂಜಾವಿನ ವಾಕರಿಕೆಯಿಂದಾಗಿ ಉಂಟಾಗುವ ನಿರ್ಜಲೀಕರಣವನ್ನು ಎದುರಿಸಲು ಅನೇಕ ಮಾರ್ಗಗಳಿವೆ.
ಪ್ರತಿದಿನ ಕನಿಷ್ಠ 8 ಕಪ್ ನೀರು ಅಥವಾ 2 ಲೀಟರ್ ದ್ರವವನ್ನು ಸೇವಿಸಿ. ದಿನ ಪೂರ್ತಿ ಸಣ್ಣ ಪ್ರಮಾಣದ ದ್ರವವನ್ನು ಸಿಪ್ ಮಾಡಿ.
ಸಾದಾ ನೀರು ಗರ್ಭಿಣಿ ಮಹಿಳೆಯ ಹೊಟ್ಟೆಗೆ ಸರಿ ಅನಿಸದಿದ್ದರೆ , ಅವರು ನೀರು ಮಿಶ್ರಿತ ರಸ, ಗ್ಯಾಸ್ ಇಲ್ಲದ ಸೋಡಾ, ಐಸ್ ಚಿಪ್ಸ್, ಸಾರು, ದುರ್ಬಲ ಚಹಾ ಮತ್ತು ನಿರ್ಜಲೀಕರಣವನ್ನು ಎದುರಿಸಲು ಪಾಪ್ಸಿಕಲ್ಗಳನ್ನು ಸೇವಿಸಬಹುದು.
ನೀವು ಸೇವಿಸುವ ಆಹಾರದೊಂದಿಗೆ ದ್ರವಗಳನ್ನು ಸೇವಿಸಬೇಡಿ. ದ್ರವವು ಹೊಟ್ಟೆಗೆ ಹೆಚ್ಚು ಒತ್ತಡವನ್ನು ಒಡ್ಡುತ್ತದೆ ಮತ್ತು ಅದು ವಾಂತಿ ಮಾಡುವ ಪ್ರವೃತ್ತಿಯನ್ನು ಹೆಚ್ಚಿಸಬಹುದು.
ಗರ್ಭಿಣಿ ಮಹಿಳೆ ಹಸಿದಾಗಲೆಲ್ಲಾ ತಿನ್ನಬೇಕು. ಗರ್ಭಿಣಿ ಮಹಿಳೆಯರು ತಮಗೆ ಇಷ್ಟವಾಗುವ ಆಹಾರವನ್ನು ಸೇವಿಸಬೇಕು.
ಪ್ರತಿ ಎರಡು ಮೂರು ಗಂಟೆಗಳಿಗೊಮ್ಮೆ ಸಣ್ಣ ಊಟವನ್ನು ಸೇವಿಸುವುದರಿಂದ ವಾಕರಿಕೆ ತಡೆಗಟ್ಟಲು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯು ವಾಕರಿಕೆಯನ್ನು ಇನ್ನಷ್ಟು ಹದಗೆಡಿಸುತ್ತದೆ.
ಆಹಾರವನ್ನು ನಿಧಾನವಾಗಿ ತಿನ್ನಿರಿ. ಆಹಾರವನ್ನು ತುಂಬಾ ವೇಗವಾಗಿ ತಿನ್ನುವುದರಿಂದ ಗರ್ಭಿಣಿ ಮಹಿಳೆ ತಮ್ಮ ಹೊಟ್ಟೆ ತಡೆದುಕೊಳ್ಳುವುದಕ್ಕಿಂತ ಹೆಚ್ಚು ತಿನ್ನಲು ಕಾರಣವಾಗುತ್ತದೆ.
ಆಹಾರವನ್ನು ಸೇವಿಸಿದ ನಂತರ, ಮಲಗುವುದನ್ನು ತಪ್ಪಿಸಬೇಕು. ಸೇವಿಸಿದ ನಂತರ ಮೂವತ್ತು ನಿಮಿಷಗಳ ಕಾಲ ದೇಹವನ್ನು ಸ್ವಲ್ಪ ನೇರವಾದ ಸ್ಥಾನದಲ್ಲಿ ಇಟ್ಟುಕೊಳ್ಳುವುದರಿಂದ ಆಹಾರ ಹೊಟ್ಟೆಯಲ್ಲೇ ಉಳಿಯಲು ಸಹಾಯ ಮಾಡುತ್ತದೆ.
ಚಿಕಿತ್ಸೆಯು ಮಹಿಳೆಯ ಮುಂಜಾವಿನ ವಾಕರಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮುಂಜಾವಿನ ವಾಕರಿಕೆಯು ಸ್ವಲ್ಪ ಸಮಯದವರೆಗೆ ಮುಂದುವರಿದರೆ, ವೈದ್ಯರು ಗರ್ಭಾವಸ್ಥೆಯಲ್ಲಿ ವಾಕರಿಕೆ ಎದುರಿಸಲು ವಿಟಮಿನ್ ಬಿ -6 ಪೂರಕಗಳನ್ನು, ಶುಂಠಿಯನ್ನು ಶಿಫಾರಸು ಮಾಡುತ್ತಾರೆ. ರೋಗಲಕ್ಷಣಗಳು ಮುಂದುವರಿದರೆ, ನಂತರ ವೈದ್ಯರು ವಾಕರಿಕೆ ಬರದಂತಹ ಔಷಧಿಗಳನ್ನು ಶಿಫಾರಸು ಮಾಡುತ್ತಾರೆ.
ಗರ್ಭಾವಸ್ಥೆಯಲ್ಲಿ ಮಧ್ಯಮದಿಂದ ತೀವ್ರವಾದ ವಾಕರಿಕೆ ಅನುಭವಿಸುವ ಮಹಿಳೆಯರು ನಿರ್ಜಲೀಕರಣಗೊಳ್ಳಬಹುದು ಮತ್ತು ಸೋಡಿಯಂ ಮತ್ತು ಪೊಟ್ಯಾಸಿಯಮ್ನ ಅಸಮತೋಲನ ಅವರ ದೇಹದಲ್ಲಿ ಸಂಭವಿಸಬಹುದು.
ಮುಂಜಾವಿನ ವಾಕರಿಕೆ ಕಾಯಿಲೆಗಾಗಿ ನೀವು ವೈದ್ಯರನ್ನು ಭೇಟಿ ಮಾಡಿದಾಗ, ಮಹಿಳೆ ಎಷ್ಟು ಬಾರಿ ವಾಂತಿ ಮಾಡಿದ್ದಾಳೆ ಅಥವಾ ಅವಳು ದ್ರವಗಳನ್ನು ಉಳಿಸಿಕೊಳ್ಳಬಹುದೇ ಅಥವಾ ಅವಳು ಯಾವ ಮನೆಮದ್ದುಗಳನ್ನು ಪ್ರಯತ್ನಿಸಿದ್ದಾಳೆ ಎಂದು ವೈದ್ಯರು ಪ್ರಶ್ನಿಸುತ್ತಾರೆ. ಪರಿಸ್ಥಿತಿಯ ತೀವ್ರತೆಯನ್ನು ಅವಲಂಬಿಸಿ, ವೈದ್ಯರು ಪ್ರಿಸ್ಕ್ರಿಪ್ಷನ್ ಔಷಧಿಯನ್ನು ಶಿಫಾರಸು ಮಾಡುತ್ತಾರೆ.
ತೀವ್ರ ಮುಂಜಾವಿನ ವಾಕರಿಕೆ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯರಿಗೆ, ಅವರು ಆಸ್ಪತ್ರೆಯಲ್ಲಿ IV ದ್ರವಗಳು ಮತ್ತು ವಾಕರಿಕೆ ಬರದಂತಹ ಔಷಧಿಗಳೊಂದಿಗೆ ಚಿಕಿತ್ಸೆ ಪಡೆಯಬೇಕಾಗಬಹುದು.
ಹೌದು, ಕೆಲವು ಮಹಿಳೆಯರಲ್ಲಿ ಮುಂಜಾವಿನ ವಾಕರಿಕೆ ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಇದು ಸಾಮಾನ್ಯವಾಗಿ ಇವರಲ್ಲಿ ಸಂಭವಿಸುತ್ತದೆ:
ಮಹಿಳೆಗೆ ಚಲನೆಯ ಕಾಯಿಲೆಯ ಇತಿಹಾಸವಿದೆ
ಗರ್ಭಿಣಿ ಮಹಿಳೆ ಒಂದಕ್ಕಿಂತ ಹೆಚ್ಚು ಮಗು -ಅವಳಿ ಅಥವಾ ತ್ರಿವಳಿಗಳನ್ನು ನಿರೀಕ್ಷಿಸುತ್ತಿದ್ದಾರೆ.
ಮೈಗ್ರೇನ್ ಅನುಭವಗಳು
ಅಧಿಕ ತೂಕ
ಗರ್ಭದಲ್ಲಿ ಅಸಹಜ ಜೀವಕೋಶಗಳ ಬೆಳವಣಿಗೆಗೆ ಕಾರಣವಾಗುವ ಟ್ರೋಫೋಬ್ಲಾಸ್ಟಿಕ್ ಕಾಯಿಲೆಯಿಂದ ಬಳಲುತ್ತಿದ್ದಾರೆ.
ತನ್ನ ಹಿಂದಿನ ಗರ್ಭಾವಸ್ಥೆಯಲ್ಲಿ ಮುಂಜಾವಿನ ವಾಕರಿಕೆಯ ಇತಿಹಾಸವನ್ನು hondiddare.
ಸ್ವಲ್ಪ ವಾಕರಿಕೆ ಅಥವಾ ಮಧ್ಯಮ ಪ್ರಮಾಣದ ವಾಕರಿಕೆ ಮಗುವಿಗೆ ಅಥವಾ ಗರ್ಭಿಣಿ ತಾಯಿಗೆ ಹಾನಿಯಾಗುವುದಿಲ್ಲ. ಆದರೆ ತಾಯಿ ಆಹಾರ ಅಥವಾ ದ್ರವವನ್ನು ಕೆಳಗೆ ಇರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅಥವಾ ನಿರ್ಜಲೀಕರಣಗೊಳ್ಳುತ್ತಿದ್ದರೆ ಮತ್ತು ತೂಕವನ್ನು ಕಳೆದುಕೊಳ್ಳುತ್ತಲೇ ಇದ್ದರೆ ಅದು ದೊಡ್ಡ ಸಮಸ್ಯೆಯಾಗಬಹುದು. ವಾಕರಿಕೆ ತಡೆಗಟ್ಟದಿದ್ದರೆ ಮತ್ತು ವಾಂತಿ ಮುಂದುವರಿದರೆ, ಗರ್ಭಿಣಿ ತಾಯಿ ಅಗತ್ಯವಾದ ಪೌಷ್ಟಿಕಾಂಶವನ್ನು ಪಡೆಯುವುದಿಲ್ಲ ಮತ್ತು ಅದು ಹುಟ್ಟಿದಾಗಲೇ ಮಗುವಿನ ತೂಕದ ಮೇಲೆ ಪರಿಣಾಮ ಬೀರುತ್ತದೆ.
ಗರ್ಭಾವಸ್ಥೆಯಲ್ಲಿ ಮುಂಜಾವಿನ ವಾಕರಿಕೆಯನ್ನು ಬಹುಪಾಲು ಗರ್ಭಿಣಿಯರು ಅನುಭವಿಸುತ್ತಾರೆ. ಮುಂಜಾವಿನ ವಾಕರಿಕೆ ಎಂದು ಹೆಸರಿಸಿದರೂ, ಅದು ಯಾವುದೇ ಸಮಯದಲ್ಲಿ ಸಂಭವಿಸಬಹುದು. ಗರ್ಭಿಣಿ ಮಹಿಳೆಯ ರೋಗಲಕ್ಷಣಗಳನ್ನು ಸರಳವಾಗಿ ಮೇಲ್ವಿಚಾರಣೆ ಮಾಡುವ ಮೂಲಕ, ಅವಳ ವಾಕರಿಕೆ ಪರಿಸ್ಥಿತಿಗಳನ್ನು ಸರಾಗಗೊಳಿಸಲು ಮತ್ತು ಗರ್ಭಾವಸ್ಥೆಯಲ್ಲಿ ಅವಳಿಗೆ ಪರಿಹಾರ ನೀಡಲು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬಹುದು. ಗರ್ಭಧಾರಣೆಯ ಚಿಕಿತ್ಸೆಯಲ್ಲಿ ವಾಕರಿಕೆಗೆ ಪರಿಹಾರ ಲಭ್ಯವಿದೆ ಮತ್ತು ಅದು ಅಂತಹ ಸಮಸ್ಯೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Nausea during pregnancy in Kannada, symptoms of nausea in Kannada, treatment for nausea in Kannada, How to cure nausea during pregnancy in Kannada, Is nausea harmful to baby in Kannada, Nausea and vomiting during pregnancy In English, গর্ভাবস্থায় বমি বমি ভাব আর বমি হওয়া (Nausea and Vomiting during Pregnancy in Bengali), Nausea & Vomiting During Pregnancy: Causes, Prevention, Treatment, and Red Flags in Telugu, Nausea & Vomiting During Pregnancy: Causes, Prevention, Treatment, and Red Flags in Hindi
Yes
No
Written by
Ramya Bhat
Get baby's diet chart, and growth tips
The Ultimate Compilation of 2 Letter Words for Children
The A-Z Guide to Identifying Root Vegetables Names for Kids
11 to 20 Table: A Complete Overview for Children
Tables 1 to 10: A Complete Overview for Children
Can Herbal Supplements Boost Your Chances of Getting Pregnant?
Sesame Seeds in Pregnancy: Nutritional Value, Benefits & Side Effects
At Mylo, we help young parents raise happy and healthy families with our innovative new-age solutions:
baby carrier | baby soap | baby wipes | stretch marks cream | baby cream | baby shampoo | baby massage oil | baby hair oil | stretch marks oil | baby body wash | baby powder | baby lotion | diaper rash cream | newborn diapers | teether | baby kajal | baby diapers | cloth diapers |