hamburgerIcon

Orders

login

Profile

STORE
SkinHairFertilityBabyDiapersMore
Tackle the chill with hot discounts🔥 Use code: FIRST10Tackle the chill with hot discounts🔥 Use code: FIRST10
ADDED TO CART SUCCESSFULLY GO TO CART
  • Home arrow
  • Scans & Tests arrow
  • ಗರ್ಭಾವಸ್ಥೆಯಲ್ಲಿ ಭ್ರೂಣದ ಡಾಪ್ಲರ್ ಸ್ಕ್ಯಾನ್: ನೀವು ಯಾವ ವಾರದಲ್ಲಿ ಅದನ್ನು ಮಾಡಿಸಬೇಕು I Fetal Doppler Scan During Pregnancy: In which week should you get it done in Kannada arrow

In this Article

     ಗರ್ಭಾವಸ್ಥೆಯಲ್ಲಿ ಭ್ರೂಣದ ಡಾಪ್ಲರ್ ಸ್ಕ್ಯಾನ್: ನೀವು ಯಾವ ವಾರದಲ್ಲಿ ಅದನ್ನು ಮಾಡಿಸಬೇಕು I Fetal Doppler Scan During Pregnancy: In which week should you get it done in Kannada

    Scans & Tests

    ಗರ್ಭಾವಸ್ಥೆಯಲ್ಲಿ ಭ್ರೂಣದ ಡಾಪ್ಲರ್ ಸ್ಕ್ಯಾನ್: ನೀವು ಯಾವ ವಾರದಲ್ಲಿ ಅದನ್ನು ಮಾಡಿಸಬೇಕು I Fetal Doppler Scan During Pregnancy: In which week should you get it done in Kannada

    Updated on 12 February 2024

    ಗರ್ಭಿಣಿ ತಾಯಂದಿರಿಗೆ ಭ್ರೂಣದ ಡಾಪ್ಲರ್ ಸ್ಕ್ಯಾನ್ ಕುರಿತು ಸಂಪೂರ್ಣ ಮಾರ್ಗದರ್ಶಿ (A Complete guide on fetal doppler scan for expecting mothers in Kannada)

    ನೀವು ಗರ್ಭಿಣಿಯಾಗಿದ್ದಾಗ ಅಥವಾ ನಿಮಗೆ ತಿಳಿದಿರುವ ಯಾರಾದರೂ ಗರ್ಭಿಣಿ ಆಗಿದ್ದರೆ ಭ್ರೂಣದ ಡಾಪ್ಲರ್ ಸ್ಕ್ಯಾನ್ ಎಂಬ ಪದವು ಅದಕ್ಕೆ ಸಂಬಂಧಪಟ್ಟ ಪದವಾಗಿದೆ. ಪ್ರತಿಯೊಂದು ಗರ್ಭಾವಸ್ಥೆಯು ವಿಭಿನ್ನವಾಗಿರುತ್ತದೆ ಮತ್ತು ಪ್ರತಿ ಮಹಿಳೆ ವಿಶಿಷ್ಟ ಅನುಭವವನ್ನು ಎದುರಿಸುತ್ತಾಳೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆರೋಗ್ಯಕರ ಮಗುವಿಗೆ ಜನ್ಮ ನೀಡಲು ಮಹಿಳೆಯರು ತೆಗೆದುಕೊಳ್ಳಬೇಕಾದ ವಿವಿಧ ವೈದ್ಯಕೀಯ ಪರೀಕ್ಷೆಗಳು ಮತ್ತು ಸಾಕಷ್ಟು ಪೋಷಕಾಂಶಗಳು ಮತ್ತು ಔಷಧಿಗಳ ಪಟ್ಟಿ ಸಹ ಬೇರೆ ಬೇರೆಯಾಗಿರುತ್ತದೆ . ಗರ್ಭಾವಸ್ಥೆಯಲ್ಲಿ, ವೈದ್ಯರು ಸಾಮಾನ್ಯವಾಗಿ ಮಗುವಿನ ಬೆಳವಣಿಗೆಯನ್ನು ಪರಿಶೀಲಿಸಲು ಡಾಪ್ಲರ್ ಸ್ಕ್ಯಾನ್ ವರದಿಯನ್ನು ಪಡೆಯುತ್ತಾರೆ. ಗರ್ಭಾವಸ್ಥೆಯಲ್ಲಿ ಈ ಡಾಪ್ಲರ್ ಸ್ಕ್ಯಾನ್ ಬಗ್ಗೆ ನಮ್ಮಲ್ಲಿ ಹಲವರಿಗೆ ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ. ಮತ್ತು ವೈದ್ಯರು ಅದನ್ನು ಸೂಚಿಸಿದಾಗ ನಾವು ಗೊಂದಲಕ್ಕೊಳಗಾಗುತ್ತೇವೆ. ನಮ್ಮನ್ನು ಹೆಚ್ಚು ಗೊಂದಲಗೊಳಿಸಲು ಹಲವು ವದಂತಿಗಳೂ ಇವೆ. ಈ ಲೇಖನವು ಗರ್ಭಾವಸ್ಥೆಯಲ್ಲಿ ಡಾಪ್ಲರ್ ಸ್ಕ್ಯಾನ್ ಬಗ್ಗೆ ಎಲ್ಲವನ್ನೂ ತಿಳಿಸುತ್ತದೆ . ಆದ್ದರಿಂದ, ಇದರ ಬಗ್ಗೆ ಸರಿಯಾಗ ತಿಳಿದುಕೊಳ್ಳಲು ಓದುವುದನ್ನು ಮುಂದುವರಿಸಿ!

    ಡಾಪ್ಲರ್ ಸ್ಕ್ಯಾನ್ ಎಂದರೇನು? (What is a doppler scan in Kannada?)

    ಡಾಪ್ಲರ್ ಸ್ಕ್ಯಾನ್ ಅಲ್ಟ್ರಾಸೌಂಡ್ ಸ್ಕ್ಯಾನ್ ನಂತೆಯೇ ಇರುತ್ತದೆ. ಇದು ರಕ್ತದ ವೇಗವನ್ನು ಮತ್ತು ಹರಿವಿನ ದಿಕ್ಕನ್ನು ಸರಿಯಾಗಿ ನಿರ್ಧರಿಸಲು ಹೆಚ್ಚಿನ ಆವರ್ತನದ ಧ್ವನಿ ತರಂಗಗಳನ್ನು (ಕೇಳಿಸದ) ಬಳಸುತ್ತದೆ. ಭ್ರೂಣದ ಬೆಳವಣಿಗೆ ಸಾಮಾನ್ಯವಾಗಿದೆಯೇ ಮತ್ತು ಅಂಗಾಂಶಗಳು ಸಾಕಷ್ಟು ರಕ್ತ ಮತ್ತು ಪೋಷಕಾಂಶಗಳನ್ನು ಹೊತ್ತೊಯ್ಯುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ವೈದ್ಯರು ಡಾಪ್ಲರ್ ಪರೀಕ್ಷಾ ವರದಿಗಳನ್ನು ಪಡೆಯುತ್ತಾರೆ. ಉಪಕರಣಗಳ ಸೆಟ್ ಮೂಳೆಗಳು ಮತ್ತು ಅಂಗಾಂಶಗಳಿಗೆ ತಾಗುತ್ತದೆ ಮತ್ತು ಅಲ್ಟ್ರಾಸೌಂಡ್ ಅನ್ನು ಉತ್ಪಾದಿಸುತ್ತದೆ ಮತ್ತು ಅದನ್ನು ಮೈಕ್ರೊಫೋನ್ನೊಂದಿಗೆ ದಾಖಲಿಸುತ್ತದೆ. ಈ ಪರೀಕ್ಷೆಯು ನೋವುರಹಿತವಾಗಿದೆ. ಟ್ರಾನ್ಸ್ಡ್ಯೂಸರ್ ಎಂಬ ಕೈಯಲ್ಲಿ ಹಿಡಿದಿರುವ ಪ್ರೋಬ್ ಬಳಸಿ ವೈದ್ಯರು ಇದನ್ನು ಮಾಡುತ್ತಾರೆ.

    ಒಂದು ಮೃದುವಾದ ಜೆಲ್ ಹೊಟ್ಟೆಯ ಮೇಲೆಲ್ಲಾ ಹಚ್ಚಲಾಗುತ್ತದೆ ಮತ್ತು ಟ್ರಾನ್ಸ್ಡ್ಯೂಸರ್ ಅನ್ನು ಹೊಟ್ಟೆಯ ಚರ್ಮದ ಮೇಲೆ ಮೃದುವಾಗಿ ಒತ್ತಲಾಗುತ್ತದೆ. ಇದು ಸಾಮಾನ್ಯ ಅಲ್ಟ್ರಾಸೌಂಡ್ಗಿಂತ ತುಂಬಾ ಭಿನ್ನವಾಗಿದೆ. ರಕ್ತನಾಳಗಳಲ್ಲಿ ರಕ್ತದ ಹರಿವನ್ನು ಪತ್ತೆಹಚ್ಚುವುದು, ರಕ್ತದ ಹರಿವಿನ ವೇಗವನ್ನು ಅಂದಾಜು ಮಾಡುವುದು, ಅದರ ದಿಕ್ಕನ್ನು ನೋಡುವುದು, ರಕ್ತ ಹೆಪ್ಪುಗಟ್ಟುವಿಕೆಯನ್ನು ಪತ್ತೆಹಚ್ಚುವುದು ಹೀಗೆ ಹಲವಾರು ಪರೀಕ್ಷೆಗೆ ಬಣ್ಣದ ಡಾಪ್ಲರ್ ಸ್ಕ್ಯಾನ್ ತುಂಬಾ ಪರಿಣಾಮಕಾರಿಯಾಗಿದೆ. ಹೆಚ್ಚಾಗಿ, ಆಧುನಿಕ-ದಿನದ ಅಲ್ಟ್ರಾಸೌಂಡ್ ಉಪಕರಣಗಳು ಅಂತರ್ನಿರ್ಮಿತ ಡಾಪ್ಲರ್ ವೈಶಿಷ್ಟ್ಯದೊಂದಿಗೆ ಬರುತ್ತದೆ ಮತ್ತು ನಿಯಮಿತ ಅಲ್ಟ್ರಾಸೌಂಡ್ ಮತ್ತು ಡಾಪ್ಲರ್ ಸ್ಕ್ಯಾನ್ಗಳು ಎರಡನ್ನೂ ಒಟ್ಟಿಗೆ ಮಾಡಬಹುದು.

    ಡಾಪ್ಲರ್ ಸ್ಕ್ಯಾನ್ ವಿಧಗಳು (Types of Doppler scan in Kannada)

    ವೈದ್ಯರು ತಮ್ಮ ರೋಗಿಗಳಿಗೆ ಅವರ ದೈಹಿಕ ಸ್ಥಿತಿ ಮತ್ತು ವೈದ್ಯಕೀಯ ಇತಿಹಾಸದ ಆಧಾರದ ಮೇಲೆ ಸೂಚಿಸುವ ವಿವಿಧ ರೀತಿಯ ಡಾಪ್ಲರ್ ಸ್ಕ್ಯಾನ್ಗಳಿವೆ. ಪತ್ತೆ ಮಾಡಬೇಕಾದುದನ್ನು ಅವಲಂಬಿಸಿ ಅದರಲ್ಲಿ 3 ರೀತಿಯ ಡಾಪ್ಲರ್ ಸ್ಕ್ಯಾನ್ ಇವೆ, ಉದಾಹರಣೆಗೆ-

    a. ಕಂಟಿನಿಯಸ್ ವೇವ್ ಡಾಪ್ಲರ್ ಸ್ಕ್ಯಾನ್ (Continuous-Wave Doppler scan)

    ಈ ಸ್ಕ್ಯಾನಿಂಗ್ ವಿಧಾನವು ರಕ್ತದ ಹರಿವಿನ ಹೆಚ್ಚಿನ ವೇಗಗಳನ್ನು ನಿಖರವಾಗಿ ಅಳೆಯುವ ಸಲುವಾಗಿ ನಿರಂತರ ಪ್ರಸರಣವನ್ನು ಹಾಗೆಯೇ ಅಲ್ಟ್ರಾಸೌಂಡ್ ಅಲೆಗಳನ್ನು ಬಳಸುತ್ತದೆ. ಆದರೆ ಇದು ರಕ್ತದ ಹರಿವಿನ ದಿಕ್ಕು ಅಥವಾ ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ಇದು ವೇಗವನ್ನು ಮಾತ್ರ ಅಳೆಯಬಹುದು. ಗರ್ಭಾವಸ್ಥೆಯಲ್ಲಿ ಇದು ಹೆಚ್ಚು ಸೂಚಿಸಲಾದ ಡಾಪ್ಲರ್ ಸ್ಕ್ಯಾನ್ ಪ್ರಕಾರವಾಗಿದೆ.

    b. ಡ್ಯುಪ್ಲೆಕ್ಸ್ ಡಾಪ್ಲರ್ (Duplex Doppler)

    ಇದು ಸುತ್ತಮುತ್ತಲಿನ ಅಂಗಗಳ ಜೊತೆಗೆ ರಕ್ತನಾಳದ ಚಿತ್ರಣವನ್ನು ನೀಡುತ್ತದೆ. ಅದೇ ರೀತಿ , ಇದು ರಕ್ತದ ಹರಿವಿನ ದಿಕ್ಕನ್ನು ಮತ್ತು ವೇಗವನ್ನು ಸಹ ಅಳೆಯಬಹುದು.

    c. ಕಲರ್ ಡಾಪ್ಲರ್ ಸ್ಕ್ಯಾನ್ (Color Doppler scan)

    ಕಲರ್ ಡಾಪ್ಲರ್ ಸ್ಕ್ಯಾನ್ ಡ್ಯುಪ್ಲೆಕ್ಸ್ ಡಾಪ್ಲರ್ ಸ್ಕ್ಯಾನ್ಗೆ ಸಾಕಷ್ಟು ಹೋಲುತ್ತದೆ ಆದರೆ ಸ್ಕ್ಯಾನ್ ಮಾಡಿದ ಪ್ರದೇಶದ ಉತ್ತಮ ದೃಶ್ಯೀಕರಣವನ್ನು ಖಂಡಿತವಾಗಿಯೂ ನೀಡುತ್ತದೆ. ಈ ಪ್ರಕ್ರಿಯೆಯಲ್ಲಿ, ಒಂದು ಕಂಪ್ಯೂಟರ್ ರಕ್ತದ ಹರಿವನ್ನು ಚಿತ್ರಿಸುವ ಬಣ್ಣದ ಚಿತ್ರಗಳನ್ನು ಸುತ್ತಮುತ್ತಲಿನ ಅಂಗಾಂಶದ ಜೊತೆಗೆ ರಕ್ತನಾಳದ ಚಿತ್ರದ ಮೇಲೆ ತೋರಿಸುತ್ತದೆ. ವಿಭಿನ್ನ ಬಣ್ಣಗಳು ರಕ್ತದ ಹರಿವಿನ ವೇಗ ಮತ್ತು ದಿಕ್ಕನ್ನು ತೋರಿಸುತ್ತವೆ. ಈ ಪ್ರಕ್ರಿಯೆಯನ್ನು ನಿರ್ವಹಿಸುವ ಸಲುವಾಗಿ, ಲ್ಯಾಬ್ ಡಾಕ್ಟರ್ ಗಳು ಅಂಗಗಳಲ್ಲಿ ರಕ್ತದ ಹರಿವನ್ನು ಪರೀಕ್ಷಿಸಲು ಪವರ್ ಡಾಪ್ಲರ್ ಅನ್ನು ಬಳಸುತ್ತಾರೆ.

    ಗರ್ಭಾವಸ್ಥೆಯಲ್ಲಿ ಡಾಪ್ಲರ್ ಸ್ಕ್ಯಾನ್ ಅನ್ನು ವೈದ್ಯರು ಏಕೆ ಸೂಚಿಸುತ್ತಾರೆ ನಾನು (Why do doctors suggest a doppler scan in pregnancy in Kannada?)

    ಹೆಚ್ಚಿನ ಗರ್ಭಾವಸ್ಥೆಯ ಸಂದರ್ಭಗಳಲ್ಲಿ, ಎರಡು ಅಲ್ಟ್ರಾಸೌಂಡ್ ಸ್ಕ್ಯಾನ್ಗಳು ಅಗತ್ಯವಾಗುತ್ತವೆ. ಶಿಶುಗಳ ಸಂಖ್ಯೆ, ಹೃದಯ ಬಡಿತ, ಮತ್ತು ಮಗುವಿನ ಬೆಳವಣಿಗೆಯನ್ನು ಪರಿಶೀಲಿಸಲು ಮತ್ತು ಹೆರಿಗೆಯ ನಿಗದಿತ ದಿನಾಂಕವನ್ನು ಊಹಿಸಲು ಮೊದಲ ತ್ರೈಮಾಸಿಕದಲ್ಲಿ ಒಂದು ಸ್ಕ್ಯಾನ್ ಮಾಡಬೇಕು. ಭ್ರೂಣವು ಯಾವುದೇ ದೈಹಿಕ ಅಸಹಜತೆಗಳನ್ನು ಹೊಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆಹಚ್ಚಲು ಮುಂದಿನ ಸ್ಕ್ಯಾನ್ ಅನ್ನು ಎರಡನೇ ತ್ರೈಮಾಸಿಕದಲ್ಲಿ ಮಾಡಲಾಗುತ್ತದೆ. ಮಗು ಸಾಮಾನ್ಯವಾಗಿ ಬೆಳೆಯುತ್ತಿದೆ ಎಂದು ತಿಳಿದುಕೊಳ್ಳಲು ವೈದ್ಯರು ಇದನ್ನು ನಡೆಸುತ್ತಾರೆ.

    ನಿಯಮಿತ ಅಲ್ಟ್ರಾಸೌಂಡ್ ಫಲಿತಾಂಶವು ಭ್ರೂಣದಲ್ಲಿನ ಅಸಹಜತೆಯನ್ನು ತೋರಿಸಿದರೆ, ಮತ್ತಷ್ಟು ಮತ್ತು ಉತ್ತಮ ತನಿಖೆಗಾಗಿ ಡಾಪ್ಲರ್ ಸ್ಕ್ಯಾನ್ ಅನ್ನು ನಡೆಸಬೇಕಾಗುತ್ತದೆ. ಈ ಸ್ಕ್ಯಾನಿಂಗ್ ವಿಧಾನವು ಪ್ಲಾಸೆಂಟಲ್ ನ ರಕ್ತದ ಹರಿವು, ಭ್ರೂಣದ ಹೊಕ್ಕುಳಿನ ರಕ್ತದ ಹರಿವು ಮತ್ತು ಹೃದಯ ಮತ್ತು ಮೆದುಳಿನಲ್ಲಿ ರಕ್ತದ ಹರಿವನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಭ್ರೂಣದಲ್ಲಿ ಎಲ್ಲವೂ ಸರಿಯಾಗಿದೆ ಮತ್ತು ಭ್ರೂಣವು ಸರಿಯಾಗಿ ಬೆಳೆಯುವುದನ್ನು ಈ ವಿಷಯಗಳು ಖಚಿತಪಡಿಸುತ್ತವೆ. ರಕ್ತದ ಹರಿವಿನ ಹಾದಿಯಲ್ಲಿ ಯಾವುದೇ ಅಡಚಣೆ ಇದ್ದರೆ ವೈದ್ಯರು ಕಾರಣವನ್ನು ಹುಡುಕಬಹುದು ಮತ್ತು ಆದಷ್ಟು ಬೇಗ ಎಲ್ಲವನ್ನೂ ಪರಿಹರಿಸಲು ಪ್ರಯತ್ನಿಸಬಹುದು.

    ಭ್ರೂಣದಲ್ಲಿ ನಿರ್ಬಂಧಿತ ಅಥವಾ ಕಡಿಮೆಯಾದ ರಕ್ತದ ಹರಿವಿನಿಂದ ಜನನದ ತೂಕ ಕಡಿಮೆಯಾಗುವುದು, ದುರ್ಬಲವಾದ ಬೆಳವಣಿಗೆ, ಕಡಿಮೆಯಾದ ಗಾತ್ರ ಮುಂತಾದವಕ್ಕೆ ಕಾರಣವಾಗಬಹುದು. ಇದರ ಹೊರತಾಗಿ, ಶಿಶುಗಳಲ್ಲಿ ಪಾರ್ಶ್ವವಾಯು ಉಂಟಾಗುವ ಅಪಾಯವನ್ನು ತಿಳಿಯುವ ಸಲುವಾಗಿ ಸಾಮಾನ್ಯವಾಗಿ ವೈದ್ಯರು ಟ್ರಾನ್ಸಾಕ್ಷನಲ್ ಡಾಪ್ಲರ್ ಎಂಬ ವಿಶೇಷ ರೀತಿಯ ಡಾಪ್ಲರ್ ಅಲ್ಟ್ರಾಸೌಂಡ್ ಅನ್ನು ನಡೆಸಲು ಸೂಚಿಸುತ್ತಾರೆ. ಸಾಮಾನ್ಯವಾಗಿ, ಸಿಕಲ್ ಸೆಲ್ ಅನೀಮಿಯ ಹೊಂದಿರುವ ಗರ್ಭದೊಳಗಿನ ಶಿಶುಗಳು ಇಂತಹ ಪರಿಸ್ಥಿತಿಗಳನ್ನು ಎದುರಿಸುತ್ತವೆ. ಡಾಪ್ಲರ್ ಸ್ಕ್ಯಾನ್ ಮಾಡಬೇಕಾದ ಮುಖ್ಯವಾದ ಇತರ ಹಲವಾರು ಸನ್ನಿವೇಶಗಳಿವೆ, ಉದಾಹರಣೆಗೆ-

    • ಮಹಿಳೆ ಗರ್ಭದಲ್ಲಿ ಅವಳಿಗಳನ್ನು ಅಥವಾ ಇನ್ನೂ ಜಾಸ್ತಿ ಹೊಂದಿದ್ದರೆ

    • ತಾಯಿ ಹೆಚ್ಚಿನ ಅಥವಾ ಕಡಿಮೆ ಬಿಎಂಐನಿಂದ ಬಳಲುತ್ತಿದ್ದರೆ

    • ತಾಯಿಗೆ ಮಧುಮೇಹ ಮತ್ತು ರಕ್ತದಲ್ಲಿ ಅಧಿಕ ಸಕ್ಕರೆ ಇದ್ದರೆ

    • ಭ್ರೂಣವು ರೀಸಸ್ ಆಂಟಿಬಯೋಟಿಕ್ ಗಳಿಂದ ಪ್ರಭಾವಿತವಾಗಿದ್ದರೆ

    • ಭ್ರೂಣದ ಬೆಳವಣಿಗೆಯ ಪ್ರಮಾಣ ಕಡಿಮೆಯಾಗಿದ್ದರೆ

    • ತಾಯಿಗೆ ಇದಕ್ಕಿಂತ ಮೊದಲು ಗರ್ಭಪಾತದ ಆಗಿದ್ದರೆ

    • ತಾಯಿ ಧೂಮಪಾನ ಮಾಡುತ್ತಿದ್ದರೆ

    ಗರ್ಭಾವಸ್ಥೆಯಲ್ಲಿ ಡಾಪ್ಲರ್ ಸ್ಕ್ಯಾನ್ಗೆ ಒಳಗಾಗಲು ನಿಮ್ಮ ವೈದ್ಯರು ಯಾವಾಗ ಸೂಚಿಸಬಹುದು (When may your doctor suggest undergoing a doppler scan during pregnancy in Kannada?)

    ನಿಯಮಿತ ಅಲ್ಟ್ರಾಸೌಂಡ್ ಸ್ಕ್ಯಾನ್ಗಳಲ್ಲಿ ವಿವಿಧ ತೊಡಕುಗಳು ಅಥವಾ ಅಸಹಜತೆಗಳು ಕಂಡುಬಂದಾಗ ವೈದ್ಯರು ಡಾಪ್ಲರ್ ಪರೀಕ್ಷೆಗಳನ್ನು ಸೂಚಿಸುತ್ತಾರೆ. ಈ ತೊಡಕುಗಳು ಈ ಸಮಯದಲ್ಲಿ ಗರ್ಭಿಣಿ ಮಹಿಳೆಗೆ ಹೆಚ್ಚಿನ ಆರೈಕೆ ನೀಡಬೇಕೆಂಬುದನ್ನು ಸೂಚಿಸುತ್ತವೆ. ಇದಲ್ಲದೆ ವೈದ್ಯರು ಈ ಕೆಳಗಿನ ಕಾರಣಗಳಿಗಾಗಿ ಡಾಪ್ಲರ್ ಪರೀಕ್ಷೆಯನ್ನು ಸೂಚಿಸಬಹುದು-

    1. ಬಹು ಗರ್ಭಧಾರಣೆಗಳು (Multiple pregnancies)

    ತಾಯಿ ಒಂದಕ್ಕಿಂತ ಹೆಚ್ಚು ಮಗುವನ್ನು ಹೊತ್ತುಕೊಂಡಿದ್ದರೆ, ಆ ರೀತಿಯ ಗರ್ಭಧಾರಣೆಯು ಹೆಚ್ಚಿನ ಅಪಾಯವನ್ನು ಹೊಂದುವುದರಿಂದ ಅದನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದು ಮುಖ್ಯ. ಉತ್ತಮ ಮೇಲ್ವಿಚಾರಣೆಗಾಗಿ, ಭ್ರೂಣದ ಡಾಪ್ಲರ್ ಸ್ಕ್ಯಾನ್ ನಡೆಸುವುದು ಮುಖ್ಯ. ಈ ರೀತಿಯ ಗರ್ಭಧಾರಣೆಯು ಸಾಮಾನ್ಯವಾಗಿ ಟಿಟಿಟಿಎಸ್, ಐಯುಜಿಆರ್, ಹೊಕ್ಕುಳಬಳ್ಳಿ ಸಿಕ್ಕಿಹಾಕಿಕೊಳ್ಳುವಿಕೆ, ಹೀಗೆ ಅನೇಕ ತೊಡಕುಗಳನ್ನು ತರುತ್ತದೆ. ಈ ಅಪಾಯಗಳು ಹೆಚ್ಚಾಗುವುದರಿಂದ ಶಿಶುಗಳು ಮತ್ತು ತಾಯಿ ಇಬ್ಬರಿಗೂ ಹಾನಿಯಾಗಬಹುದು. ಆದರೆ ಡಾಪ್ಲರ್ ಸ್ಕ್ಯಾನ್ ಯಾವುದೇ ವೈಪರೀತ್ಯಗಳು ಅಥವಾ ತೊಡಕುಗಳನ್ನು ಗುರುತಿಸುವಲ್ಲಿ ನಿಜವಾಗಿಯೂ ಪರಿಣಾಮಕಾರಿಯಾಗಿದೆ.

    2. ಪ್ಲಾಸೆಂಟಲ್ ಸಮಸ್ಯೆಗಳು (Placental problems)

    ಗರ್ಭದಲ್ಲಿ, ತಾಯಿಯಿಂದ ಮಗುವಿಗೆ ರಕ್ತ, ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಪ್ಲಾಸೆಂಟಾ ಒದಗಿಸುತ್ತದೆ. ಮಗು ನೈಸರ್ಗಿಕವಾಗಿ ಬೆಳೆಯಲು ಪ್ಲಾಸೆಂಟಾ ಮೂಲಕ ಆರೋಗ್ಯಕರ ರಕ್ತದ ಹರಿವು ಮುಖ್ಯವಾಗಿದೆ. ಅಸಹಜತೆಯನ್ನು ಪತ್ತೆಹಚ್ಚಲು ಭ್ರೂಣದ ಡಾಪ್ಲರ್ ಸ್ಕ್ಯಾನ್ ವರದಿ ಯಾವ ವಾರದಲ್ಲಿ ಮುಖ್ಯವಾಗಿದೆ ಎಂದು ಹಲವರು ಕೇಳುತ್ತಾರೆ. ಸಾಮಾನ್ಯವಾಗಿ, ಎರಡನೇ ತ್ರೈಮಾಸಿಕದಲ್ಲಿ, ವೈದ್ಯರು ಅನಿಯಮಿತ ರೋಗನಿರ್ಣಯದ ಸ್ಕ್ಯಾನ್ ಅನ್ನು ಮಾಡಿಸಲು ಶಿಫಾರಸು ಮಾಡುತ್ತಾರೆ. ವರದಿಯು ಭ್ರೂಣದ ನಿಧಾನ ಚಲನೆಯನ್ನು ತೋರಿಸಿದರೆ , ವೈದ್ಯರು ಕಾರಣವನ್ನು ಗುರುತಿಸಬಹುದು ಮತ್ತು ಅದಕ್ಕೆ ಅಗತ್ಯವಾಗಿದ್ದನ್ನು ಮಾಡಬಹುದು. ಪ್ಲಾಸೆಂಟಾ ಪ್ರಿವಿಯಾ ಸಂದರ್ಭದಲ್ಲಿ, ತಾಯಂದಿರಿಗೆ ಸಹ ಅದೇ ಸ್ಕ್ಯಾನ್ ಅನ್ನು ಶಿಫಾರಸು ಮಾಡಬಹುದು. ಅಂತಹ ಸ್ಕ್ಯಾನ್ನೊಂದಿಗೆ, ಪ್ಲಾಸೆಂಟಾದ ಸ್ಥಿತಿಯನ್ನು ಪತ್ತೆಹಚ್ಚುವುದು ಸುಲಭ.

    3. ತಾಯಿಯ ಆರೋಗ್ಯ ಸ್ಥಿತಿ (Health condition of the mother)

    ತಾಯಿಯ ಒಟ್ಟಾರೆ ಆರೋಗ್ಯವು ಮಗುವಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಡೋಪ್ಲರ್ ಪರೀಕ್ಷೆಯು ಹೊಕ್ಕುಳಿನ ಅಪಧಮನಿಗಳು ಮತ್ತು ಪ್ಲಾಸೆಂಟಾದಲ್ಲಿ ರಕ್ತದ ಹರಿವಿನ ಪ್ರಮಾಣವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ತಾಯಿಯ ಕೆಲವು ಗಂಭೀರ ಆರೋಗ್ಯ ಪರಿಸ್ಥಿತಿಗಳಲ್ಲಿ, ರಕ್ತದ ಹರಿವು ಅಪಧಮನಿಗಳ ಕಡೆಗೆ ಹೋಗುವಲ್ಲಿ ಅಡಚಣೆಯಾಗಬಹುದು ಮತ್ತು ಇದು ಭ್ರೂಣಕ್ಕೆ ಕಡಿಮೆ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆಗೆ ಕಾರಣವಾಗಬಹುದು. ತಾಯಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದರೆ, ಅದು ಕ್ಲಿಷ್ಟವಾದ ಗರ್ಭಧಾರಣೆಯಾಗಿ ಬದಲಾಗಬಹುದು.

    4. ಭ್ರೂಣದ ಆರೋಗ್ಯ ಸ್ಥಿತಿ (Health condition of the fetus)

    ಹಿಂದಿನ ಮಾಮೂಲು ಅಲ್ಟ್ರಾಸೌಂಡ್ ಸ್ಕ್ಯಾನ್ನಲ್ಲಿ ಭ್ರೂಣದ ಬೆಳವಣಿಗೆಯು ತೃಪ್ತಿಕರವಾಗಿಲ್ಲದಿದ್ದರೆ, ವಿಷಯಗಳನ್ನು ಆಳವಾದ ರೀತಿಯಲ್ಲಿ ತಿಳಿದುಕೊಳ್ಳಲು ಡಾಪ್ಲರ್ ಸ್ಕ್ಯಾನ್ ಪರೀಕ್ಷೆಯನ್ನು ಮಾಡಿಸುವಂತೆ ವೈದ್ಯರು ಸೂಚಿಸಬಹುದು.

    ಮೇಲಿನ ಪರಿಸ್ಥಿತಿಗಳಿಗೆ, ವೈದ್ಯರು ಡಾಪ್ಲರ್ ಪರೀಕ್ಷೆಯನ್ನು ಸೂಚಿಸಬಹುದು. ಸಾಮಾನ್ಯ ಅಲ್ಟ್ರಾಸೌಂಡ್ ಪರೀಕ್ಷೆಗಳಿಗೆ ಹೋಲಿಸಿದರೆ ಭ್ರೂಣದ ಡಾಪ್ಲರ್ ಸ್ಕ್ಯಾನ್ ವೆಚ್ಚವು ಸ್ವಲ್ಪ ದುಬಾರಿಯೆಂದು ತೋರಬಹುದು. ಆದರೆ ಇಂತಹ ಪರೀಕ್ಷೆಗಳನ್ನು ಕಡಿಮೆ ವೆಚ್ಚದಲ್ಲಿ ನಡೆಸಲು ನೆರವಾಗುವ ಸಾಕಷ್ಟು ಸರ್ಕಾರಿ ಸೌಲಭ್ಯಗಳಿವೆ. ಎಲ್ಲ ಅಂಶಗಳು ಸರಿಯಿಲ್ಲದಾಗ ಮಾತ್ರ ಡಾಪ್ಲರ್ ಸ್ಕ್ಯಾನ್ ಪರೀಕ್ಷೆಯನ್ನು ಸೂಚಿಸಲಾಗುತ್ತದೆ ಎಂದು ಹಲವರು ಭಾವಿಸಿದ್ದಾರೆ. ಇದು ಅವರಲ್ಲಿ ಉದ್ವೇಗದ ಭಾವನೆಯನ್ನು ಸೃಷ್ಟಿಸುತ್ತದೆ.

    IFrameಡಾಪ್ಲರ್ ಸ್ಕ್ಯಾನ್ ಪರೀಕ್ಷೆ ಸುರಕ್ಷಿತವೇ (Is the doppler scan test safe in Kannada?)

    ವೈದ್ಯರು ಇದನ್ನು ಸೂಚಿಸಿದರೆ ಅನೇಕ ಗರ್ಭಿಣಿ ತಾಯಂದಿರು ಮತ್ತು ಅವರ ಕುಟುಂಬಗಳು ಯೋಚಿಸುವ ಸಾಮಾನ್ಯ ಪ್ರಶ್ನೆ ಇದಾಗಿದೆ. ಯಾವುದೇ ಇತರ ಅಲ್ಟ್ರಾಸೌಂಡ್ ಸ್ಕ್ಯಾನ್ ಪರೀಕ್ಷೆಯಂತೆಯೇ, ಇದು ತುಂಬಾ ಸುಲಭ ಮತ್ತು ಸುರಕ್ಷಿತವಾಗಿದೆ. ತರಬೇತಿ ಪಡೆದ ಮತ್ತು ಪ್ರಮಾಣೀಕೃತ ವೃತ್ತಿಪರರಿಂದ ಮಾಡಿಸಿದಾಗ ಡಾಪ್ಲರ್ ಸ್ಕ್ಯಾನ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಸಂಪೂರ್ಣ ಸ್ಕ್ಯಾನ್ ಸಮಯದಲ್ಲಿ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸೋನೋಗ್ರಾಫರ್ ಮಾರ್ಗಸೂಚಿಗಳನ್ನು ಅನುಸರಿಸಿ ಸ್ಕ್ಯಾನ್ ಅನ್ನು ಕೈಗೊಳ್ಳುತ್ತಾರೆ. ಇದರ ಪರಿಣಾಮವಾಗಿ ಪ್ರಕ್ರಿಯೆಯು ಸಣ್ಣ ಪ್ರಮಾಣದ ಶಾಖವನ್ನು ಉಂಟುಮಾಡಬಹುದು. ಆದರೆ ಶಾಖವನ್ನು ಪರೀಕ್ಷಿಸಲು ಥರ್ಮಲ್ ಇಂಡೆಕ್ಸ್ ಡಿಸ್ಪ್ಲೇ ಇರುತ್ತದೆ.

    ಸಾಮಾನ್ಯವಾಗಿ, ಈ ಯಂತ್ರಗಳು ಕಡಿಮೆ ಉಷ್ಣ ಸೂಚ್ಯಂಕದೊಂದಿಗೆ ಬರುತ್ತವೆ ಮತ್ತು ಗರ್ಭಧಾರಣೆಯ ವಿವಿಧ ಹಂತಗಳಿಗೆ ಇತರ ಔಟ್ಪುಟ್ ಸೆಟ್ಟಿಂಗ್ಗಳೊಂದಿಗೆ ಬರುತ್ತವೆ. ಸ್ಕ್ಯಾನ್ಗೆ 30 ನಿಮಿಷಗಳ ಅಗತ್ಯವಿರಬಹುದು ಮತ್ತು ಇದು ತಾಯಿ ಅಥವಾ ಮಗುವಿಗೆ ಯಾವುದೇ ಹಾನಿ ಉಂಟುಮಾಡುವುದಿಲ್ಲ.

    ಡಾಪ್ಲರ್ ಸ್ಕ್ಯಾನ್ ಪರೀಕ್ಷೆಗೆ (ಒಬ್ ಸ್ಟರಿಕ್ ಡಾಪ್ಲರ್ ಸ್ಕ್ಯಾನ್ ಅಥವಾ ಸ್ಕ್ರೋಟಲ್ ಡಾಪ್ಲರ್ ಸ್ಕ್ಯಾನ್ ಅಥವಾ ಕಲರ್ ಡಾಪ್ಲರ್ ಸ್ಕ್ಯಾನ್) ಒಳಗಾಗುವ ಮುನ್ನ ನೀವು ಇದನ್ನೆಲ್ಲಾ ತಿಳಿದುಕೊಳ್ಳಬೇಕಾಗಿದೆ. ಆದರೆ ನಿಖರವಾದ ಸ್ಕ್ಯಾನ್ ಪರೀಕ್ಷಾ ವರದಿಯನ್ನು ಪಡೆಯಲು ಸರಿಯಾದ ಸ್ಕ್ಯಾನ್ ಸೆಂಟರ್ ಅನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಸ್ಕ್ಯಾನ್ ಸೆಂಟರ್ ಅಂತಿಮಗೊಳಿಸುವ ಮೊದಲು, ನಿಮ್ಮ ಸ್ಥಳದಲ್ಲಿ ಲಭ್ಯವಿರುವ ಪ್ರಮುಖ ಸೆಂಟರ್ ಗಳ ಬಗ್ಗೆ ನೀವು ಸ್ವಲ್ಪ ಸಂಶೋಧನೆ ಮಾಡಬೇಕು, ಅವುಗಳ ವಿಮರ್ಶೆಗಳು, ಕಾರ್ಯವಿಧಾನಗಳು ಇತ್ಯಾದಿಗಳನ್ನು ಪರಿಶೀಲಿಸಿ, ತದನಂತರ ಯಾವುದನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಬೇಕು. ಪ್ರಮಾಣೀಕೃತ ಮತ್ತು ತರಬೇತಿ ಪಡೆದ ವೃತ್ತಿಪರರು, ಸುಧಾರಿತ ಉಪಕರಣಗಳು, ಸರಿಯಾದ ವಿಧಾನ ಮತ್ತು ವ್ಯವಸ್ಥೆಗಳು, ಮತ್ತು ಪೂರ್ಣ ಭದ್ರತೆಯೊಂದಿಗೆ ಇರುವ ಸ್ಕ್ಯಾನ್ ಸೆಂಟರ್ ಅನ್ನು ಆರಿಸಿಕೊಳ್ಳಿ.

    ಗರ್ಭಾವಸ್ಥೆಯ ಸಮಯದಲ್ಲಿ ಡಾಪ್ಲರ್ ಸ್ಕ್ಯಾನ್ ಪರೀಕ್ಷೆಯು ಸಾಕಷ್ಟು ಸಾಮಾನ್ಯ ವಿಷಯವಾಗಿದೆ. ನಿಮ್ಮ ಅಲ್ಟ್ರಾಸೌಂಡ್ ವರದಿ ಅಸಹಜತೆಯನ್ನು ಒಳಗೊಂಡಿದೆ ಮತ್ತು ಆ ಕಾರಣಕ್ಕಾಗಿ ಮಾತ್ರ ವೈದ್ಯರು ಈ ಪರೀಕ್ಷೆಯನ್ನು ಸೂಚಿಸಿದ್ದಾರೆ ಎಂದು ಅಲ್ಲ. ಆಳವಾದ ವಿಶ್ಲೇಷಣೆಗಾಗಿ ಆಧುನಿಕ ವೈದ್ಯರು ಇದನ್ನು ಸೂಚಿಸುತ್ತಾರೆ. ಇದು ಗರ್ಭಿಣಿ ತಾಯಂದಿರು ಮತ್ತು ಅವರ ಶಿಶುಗಳಿಗೆ ಇದು ಸಂಪೂರ್ಣವಾಗಿ ಸುರಕ್ಷಿತ ಮತ್ತು ಸುಲಭವಾಗಿದೆ.

    References

    1. Alfirevic Z, Stampalija T, Medley N. (2015). Fetal and umbilical Doppler ultrasound in normal pregnancy. NCBI

    2. Jostein Grytten, Irene Skau, Anne Eskild, Does the use of Doppler ultrasound reduce fetal mortality? A population study of all deliveries in Norway 1990–2014, International Journal of Epidemiology. academic.oup.com

    Tags

    Fetal Doppler Scan During Pregnancy in Kannada, What is Fetal Doppler Scan During Pregnancy in Kannada, Fetal Doppler scan in Kannada, Fetal Doppler Scan During Pregnancy in English, Fetal Doppler Scan During Pregnancy in Tamil, Fetal Doppler Scan During Pregnancy in Bengali, Fetal Doppler Scan During Pregnancy in Telugu, Fetal Doppler Scan During Pregnancy in Malayalam

    Is this helpful?

    thumbs_upYes

    thumb_downNo

    Written by

    Ramya Bhat

    Get baby's diet chart, and growth tips

    Download Mylo today!
    Download Mylo App

    RECENTLY PUBLISHED ARTICLES

    our most recent articles

    foot top wavefoot down wave

    AWARDS AND RECOGNITION

    Awards

    Mylo wins Forbes D2C Disruptor award

    Awards

    Mylo wins The Economic Times Promising Brands 2022

    AS SEEN IN

    Mylo Logo

    Start Exploring

    wavewave
    About Us
    Mylo_logo

    At Mylo, we help young parents raise happy and healthy families with our innovative new-age solutions:

    • Mylo Care: Effective and science-backed personal care and wellness solutions for a joyful you.
    • Mylo Baby: Science-backed, gentle and effective personal care & hygiene range for your little one.
    • Mylo Community: Trusted and empathetic community of 10mn+ parents and experts.